ಸಗಣಿಯಿಂದ ಅಲಂಕರಿಸಿದ ಕಾರಿನಲ್ಲಿ ಮಗಳನ್ನು ಪತಿಯ ಮನೆಗೆ ಕಳುಹಿಸಿದ ವೈದ್ಯ

ಗುರುವಾರ, 9 ಜನವರಿ 2020 (05:46 IST)
ಮುಂಬೈ : ಸಾಮಾನ್ಯವಾಗಿ ಮದುವೆಗೆ ಬಳಸುವ ಕಾರನ್ನು ಹೂವಿನಿಂದ ಅಲಂಕಾರ ಮಾಡುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ತನ್ನ ಮಗಳನ್ನು ಪತಿಯ ಮನೆಗೆ ಕಳುಹಿಸುವ ಕಾರನ್ನು ಹಸುವಿನ ಸಗಣಿಯಿಂದ ಅಲಂಕಾರ ಮಾಡಿದ್ದಾನೆ.



ಹೌದು. ಮಹಾರಾಷ್ಟ್ರದ ಕೊಲ್ಲಾಪುರದ ನಿವಾಸಿ ಡಾ.ನವನಾಥ್ ದೂಧಾಲ್ ಎಂಬುವವರು ಸಗಣಿಯ ಮಹತ್ವ ತಿಳಿಸುವ ಸಲುವಾಗಿ  ತನ್ನ ಟೊಯೊಟೊ ಕಾರನ್ನು ಸಂಪೂರ್ಣವಾಗಿ ಹಸುವಿನ ಸಗಣಿಯಿಂದ ಅಲಂಕಾರ ಮಾಡಿ ಅದರಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸಿದ್ದಾರೆ.


ಸಗಣಿಯಲ್ಲಿ ಔಷಧೀಯ ಗುಣವಿದ್ದು, ಇದು  ಜನರನ್ನು ಕಾಯಿಲೆಯಿಂದ ಕಾಪಾಡುತ್ತದೆ. ಅಲ್ಲದೇ ಇದರಿಂದ ವಾತಾವರಣದಲ್ಲಿ ಅಧಿಕ ತಾಪಮಾನವಿದ್ದರೂ  ಕಾರಿನ ಒಳಭಾಗ ತಣ್ಣಗಾಗಿರುತ್ತದೆ. ಹಾಗೇ ಸಗಣಿಯೂ  ಕಾರಿನಲ್ಲಿರುವವರನ್ನು ರೇಡಿಯೇಷನ್  ನಿಂದ ಕಾಪಾಡುತ್ತದೆ ಎಂದು ಡಾ.ನವನಾಥ್ ದೂಧಾಲ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ