ಬಡವರ ಕನಸಿನ ಮನೆ ಜಾಗದಲ್ಲಿ ತಲೆ ಎತ್ತಲಿದೆ ತಾಲೂಕು ಕಚೇರಿ..!

ಭಾನುವಾರ, 16 ಸೆಪ್ಟಂಬರ್ 2018 (15:46 IST)
ಒಂದು  ಕೈಯಿಂದ ಕೊಟ್ಟು ಮತ್ತೊಂದು ಕೈ ಯಿಂದ ಕಸಿದು ಕೊಳ್ತಿದ್ದಾರೆ ಬಡವರ ಪಾಲಿನ ಮಹತ್ವಕಾಂಕ್ಷಿ ಯೋಜನೆ. ನೆತ್ತಿ ಮೇಲಿನ ಸೂರಿಗಾಗಿ ಸರ್ಕಾರ ಕೊಟ್ಟ ಜಾಗದಲ್ಲಿ ಈಗ ತಾಲೂಕು ಕಚೇರಿ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ನೊಂದ ಕುಟುಂಬಗಳು ಒಂದು ವಾರದಿಂದ ಪ್ರತಿಭಟನೆ ಮಾಡುತ್ತಿದ್ದಾರೆ.  

ಬೀದರ್ ಜಿಲ್ಲೆಯ ನೂತನ ತಾಲೂಕು ಕಮಲನಗರ ಗ್ರಾಮದಲ್ಲಿ 2001 ರಲ್ಲಿ 110 ಬಡ ಕುಟುಂವಗಳಿಗೆ ಆಶ್ರಯ ಯೋಜನೆ ಅಡಿಯಲ್ಲಿ 30 * 35 ಅಡಿಯ ಒಂದೊಂದು ಸೈಟ್ ಕೊಟ್ಟಿದೆ. ಅದಕ್ಕಾಗಿ ಪ್ರಮಾಣ ಪತ್ರ ಕೂಡ ನೀಡಿದೆ. ಆದ್ರೆ ಸರ್ಕಾರ ಘೋಷಣೆ ಮಾಡಿದ ವಸತಿ ಉದ್ದೇಶದ ಜಾಗದಲ್ಲಿ ಈಗ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ.

ಕಳೆದ ವಾರ ಜಿಲ್ಲಾಧಿಕಾರಿ ಎಚ್.ಆರ್ ಮಹದೇವ್ ನೇತೃತ್ವದಲ್ಲಿ ಅಧಿಕಾರಿಗಳ ಸ್ಥಳ ಪರಿಶಿಲನೆ ಮಾಡಿ, ಆಶ್ರಯ ಯೋಜನೆ ಮನೆಗಳ ಫಲಾನುಭವಿಗಳಿಗೆ ಘೋಷಣೆ ಮಾಡಿದ ಭೂಮಿಯನ್ನೆ ತಾಲೂಕು ಕಚೇರಿ ನಿರ್ಮಾಣಕ್ಕೆ ಗುರುತಿಸಿರುವುದರಿಂದ ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ.

ಒಂದು ವಾರದಿಂದ ತಮ್ಮ ಜಮಿನಿನಲ್ಲಿ ಕುಳಿತು ಪ್ರತಿಭಟನೆ ಮಾಡ್ತಿದ್ದಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಬೀದಿಗೆ ಬಂದು ಹೋರಾಟ ಮಾಡ್ತಿದ್ದಾರೆ. ಆದ್ರೆ ಇವರ ಧರಣಿ ಊರ ಬಿಟ್ಟು ದೂರ ಇರುವುದರಿಂದ ಯಾರೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಈವರೆಗೆ ಭೇಟಿ ನೀಡಿಲ್ಲ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ