ಆಸ್ಪತ್ರೆಯಲ್ಲಿ ಬೆಂಕಿಯಲ್ಲಿ ಬೆಂದ ಜೀವಗಳ ಕುಟುಂಬಗಳ ಪರದಾಟ

ಶನಿವಾರ, 12 ಆಗಸ್ಟ್ 2023 (20:02 IST)
ಇಂದು ವಿಕ್ಟೋರಿಯಾ ಆಸ್ಪತ್ರೆಯ ಟ್ರೋಮಾ ಕೇರ್ ಸೆಂಟರ್ ನಲ್ಲಿ ನಿನ್ನೆ ಬಿಬಿಎಂಪಿ ಕಚೇರಿಯಲ್ಲಿ ನಡೆದ ಬೆಂಕಿಯಲ್ಲಿ ಅವಘಡದಲ್ಲಿ ಬೆಂದ ಜೀವಗಳ ಕುಟುಂಬಗಳ ಅರಚಾಟ ನರಳಾಟ ಮುಗಿಲು ಮುಟ್ಟಿತ್ತು.  ಬೆಂಕಿ ಅವಘಡದ ತೀವ್ರತೆಗೆ  ಒಂಭತ್ತು ಜನ ಸಿಬ್ಬಂದಿಗಳು ನರಳಾಡುತ್ತಿದ್ದು,ಗಾಯಗೊಂಡಿರಿವ ಸಿಬ್ಬಂದಿಗಳನ್ನು  ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಇಂದು ಆರೋಗ್ಯ ಸಚಿವರು ಸೇರಿಂದ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಗಾಯಳುಗಳ ಸ್ಥಿತಿಯನ್ನು ಪರೀಶಿಲಿಸಿದರು.

ನ್ನೆ ಬಿಬಿಎಂಪಿಯ ಮುಖ್ಯ ಕಚೇರಿಯ ಗುಣ ನಿಯಂತ್ರಣ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು. ಬೆಂಕಿಯ ತೀವ್ರತೆಗೆ  9 ಜನ ಸಿಬ್ಬಂದಿಗಳು ಬೆಂಕಿಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡಿದ್ದಾರೆ,ಗಾಯಾಳುಗಳಿಗೆ ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌‌ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಾಳುಗಳನ್ನು ನೋಡಲು ಕುಟುಂಬಸ್ಥರು ಪರದಾಟ ನಡೆಸುವ ಸ್ಥಿತಿ ಉದ್ಬವಾಗಿದ್ದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.ಇನ್ನೂ. 9 ಜನ ಸಿಬ್ಬಂದಿಗಳಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದ್ದು, ಒಂದು ಸ್ಪೇಷಲ್  ತಂಡವನ್ನು ರಚನೆ ಮಾಡಲಾಗಿದೆ, ಇನ್ನೂ ಗಾಯಗೊಂಡಿರುವ ಬಿಬಿಎಂಪಿ ಸಿಬ್ಬಂದಿಗಳನ್ನು  48 ಗಂಟೆಗಳ ಕಾಲ ಅಬ್ಸರ್ವೇಷನ್‌ನಲ್ಲಿ ಇರಿಸಲಾಗಿದೆ. ಇವರಲ್ಲಿ ಇಂಜಿನಿಯರ್ ಶಿವಕುಮಾರ್ ಹಾಗೂ ಜ್ಯೋತಿ ಅವರ ಕಂಡೀಷನ್ ಕೊಂಚ ಸಿರೀಯಸ್ ಆಗಿದ್ದು ಇನ್ನೂಳಿದವರಿಗೆ ಸಣ್ಣ ಪ್ರಮಾಣದಲ್ಲಿ ಶ್ವಾಸಕೋಶಕ್ಕೆ ಹಾನಿಯಾಗಿದ್ದು, ಯಾರಿಗೂ ಕೂಡ ಕಣ್ಣಿನ ತೊಂದರೆಯಾಗಿಲ್ಲ. ಸದ್ಯ ಇಬ್ಬರ ಸ್ಥಿತಿ ಮಾತ್ರ ಗಂಭೀರವಾಗಿದ್ದು ಅವರು ಕೂಡ ಅದಷ್ಟೂ ಬೇಗಾ ಚೇತರಿಸಿಕೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ.

ಇನ್ನೂ ಬೆಂಗಳೂರಿನ ಮುಖ್ಯ ಕಚೇರಿಯಾಗಿರುವ ಬಿಬಿಎಂಪಿಯಲ್ಲೇ ಇಂತಹ ಅವಘಡ ಸಂಭವಿಸಿದ್ದು ನಿಜಕ್ಕೂ ಅಚ್ಚರಿಯ ವಿಷಯ. ಇನ್ನೂ ಈ ಘಟನೆ ತಿಳಿಯುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,  ಶಾಸಕ ಅಶ್ವತ್ಥ ನಾರಾಯಣ್, ಎಂಎಲ್‌ಸಿ ರವಿಕುಮಾರ್ ಆಗಮಿಸಿ, ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿದರು. ಗಾಯಳುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ವೈದ್ಯರಿಗೆ ಸೂಚಿಸಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ