ಕಗ್ಗತ್ತಲಲ್ಲಿ ಮುಳುಗಿದ ಇತಿಹಾಸ ಪ್ರಸಿದ್ಧ ಬೌರಿಂಗ್ ಆಸ್ಪತ್ರೆ

ಭಾನುವಾರ, 5 ಫೆಬ್ರವರಿ 2023 (21:47 IST)
ಕಗ್ಗತ್ತಲಲ್ಲಿ ಮುಳುಗಿದ ಇತಿಹಾಸ ಪ್ರಸಿದ್ಧ ಬೋರಿಂಗ್ ಆಸ್ಪತ್ರೆ.‌ ಸರ್ಕಾರ, ಇಲಾಖೆ ಬೇಜವಬ್ದಾರಿಗೆ ಬೇಸತ್ತ ಬಡ ರೋಗಿಗಳು
 ಶಿವಾಜಿನಗರದ ಬೋರಿಂಗ್ ಆಸ್ಪತ್ರೆ ಅಂದ್ರೆ ಬ್ರಿಟೀಷರ ಆಳ್ವಿಕೆ ನೆನಪಿಸುತ್ತೆ. ಬ್ರಿಟಿಷರ್ ಕಾಲದ ಲೇಡಿ ಕರ್ಜನ್ ರಸ್ತೆಯ ಬೋರಿಂಗ್ ಆಸ್ಪತ್ರೆ ಸದ್ಯ ಕಗ್ಗತ್ತಲ್ಲಲಿ ಮುಳಿಗಿದೆ. ಕಳೆದ ಎರಡು ದಿನಗಳಿಂದ ಕರೆಂಟ್ ಇಲ್ಲದೆ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳು ಕತ್ತಲಲ್ಲೆ ಕಾಲ ಕಳೆಯುತ್ತಿದ್ದಾರೆ. ನಿತ್ಯ ಸಾವಿರಾರು ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿತ್ಯ ಹತ್ತಾರು ಗರ್ಭಿಣಿಯರು ಹೆರಿಗೆ ಕೂಡ ಇದೇ ಆಸ್ಪತ್ರೆ ಅವಲಂಬಿಸಿದ್ದು,  ಸದ್ಯ ನಿನ್ನೆ ಹೆರಿಯಾದ ತಾಯಿ ಮಗುವನ್ನ ವಾಣಿ ವಿಕಾಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದ್ರೆ ಪವರ್ ಕಟ್ ಗೆ ನಿಖರ ಕಾರಣ ತಿಳಿದು ಬಂದಿಲ್ಲ.‌ಮೂಲಗಳ ಪ್ರಕಾರ ಆಸ್ಪತ್ರೆ ಕರೆಂಟ್ ಬಿಲ್ ಪಾವತಿಸಿದ ಕಾರಣ ಬೆಸ್ಕಾಂ ಆಸ್ಪತ್ರೆ ಪವರ್ ಕಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಸರ್ಕಾರ  ಮತ್ತು ಇಲಾಖೆ ಬಡ ಜನರಿಗೆ ಅವಶ್ಯವಿರುವ ಆಸ್ಪತ್ರೆ ಕರೆಂಟ್ ಬಿಲ್ ಕಟ್ಟದೆ ಕಳ್ಳಾಟ ಆಡ್ತಿದ್ದು ಬಡ ರೋಗಿಗಳು  ನರಕಯಾತನೆ ಅನುಭವಿಸುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ