ಸಿಎಂ ಯಿಂದ ರೈತ ಮಹಿಳೆಗೆ ಅವಮಾನ; ನಾಳೆಯಿಂದ ರಾಜ್ಯ ವ್ಯಾಪಿ ಪ್ರತಿಭಟನೆಗೆ ಮುಂದಾದ ಬಿಜೆಪಿ
ಮಂಗಳವಾರ, 20 ನವೆಂಬರ್ 2018 (14:15 IST)
ಬೆಂಗಳೂರು :ಸಿಎಂ ಹೆಚ್.ಡಿ.ಕುಮಾರಸ್ವಾಮಿ ರೈತ ಮಹಿಳೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆಬಿಜೆಪಿ ನಾಳೆಯಿಂದ ರಾಜ್ಯ ವ್ಯಾಪಿ ಪ್ರತಿಭಟನೆಗೆ ಮುಂದಾಗಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ‘ನೀವು ಹಾಗೂ ದೇವೆಗೌಡರು ದೇಶದ ಅತಿ ದೊಡ್ಡ ಸಮಯ ಸಾಧಕ ರಾಜಕಾರಣಿಗಳು. ನೀವು ಹೆಣ್ಣು ಮಗಳ ವಿರುದ್ದ ಮಾತನಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ ಅಂತ ವಾಗ್ದಾಳಿ ನಡೆಸಿದಲ್ಲದೇ, ನಾಳೆಯಿಂದ ರಾಜ್ಯ ವ್ಯಾಪಿ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ ಎಂಬುದಾಗಿ ಘೋಷಣೆ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು,’ ಹಾವೇರಿಯಲ್ಲಿ ಗೋಲಿಬಾರ್ ಮಾಡಿಸಿದ್ರು ಅಂತ ಬಾಯ್ ಬಡ್ಕೋತೀರಿ., ಆದರೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನಾನು ಕೃಷಿ ಬಜೆಟ್ ಮಂಡಿಸಿದೆ.ರೈತರ ಪಂಪ್ ಸೆಂಟ್ ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಇದಲ್ಲದೇ ನನ್ನ ಅಧಿಕಾರವಾಧಿಯಲ್ಲಿ ನಡೆದ ಗೋಲಿಬಾರ್ ನಲ್ಲಿ ಹತರಾದ ರೈತರ ಕುಟುಂಬಕ್ಕೆ ಉದ್ಯೋಗ ಕೊಡಿಸಿದೆ.ಸಾಂತ್ವಾನ ಹೇಳಿದ್ದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ