ಭೀಮಾ ತೀರ ಆಯ್ತು ಈಗ ಕೃಷ್ಣಾ ತೀರದಲ್ಲಿ ಹೆಚ್ಚಿದೆ ಭಯ

ಶುಕ್ರವಾರ, 6 ಸೆಪ್ಟಂಬರ್ 2019 (16:31 IST)
ಭೀಮಾ ತೀರದ ಜನರು ಭಯದಲ್ಲಿರುವ ಸಂದರ್ಭದಲ್ಲೇ ಕೃಷ್ಣಾ ತೀರದ ಜನರು ಭಯಭೀತರಾಗುತ್ತಿದ್ದಾರೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಗೆ ಚಿಕ್ಕೋಡಿ ಎಸಿ, ತಹಸಿಲ್ದಾರ್ ಭೇಟಿ ನೀಡಿದ್ರು. ನದಿ ತೀರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಎಸಿ ಮತ್ತು ತಹಸಿಲ್ದಾರ್, ಜನರ ಸಮಸ್ಯೆಗಳನ್ನು ಕೇಳಿದ್ರು.

ಎಸಿ ರವೀಂದ್ರ ಕರಲಿಂಗನವರ ಮತ್ತು ತಹಸಿಲ್ದಾರ್ ಸಂತೋಷ ಬಿರಾದಾರ್ ಭೇಟಿ ನೀಡಿದ್ದು, ಈಗಾಗಲೇ ಕೃಷ್ಣಾ ನದಿಗೆ 1 ಲಕ್ಷ 24 ಸಾವಿರ ಕ್ಯೂಸೇಕ್ ನೀರು ಹರಿದು ಬರುತ್ತಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯೆತೆ ಇದೆ ಎಂದ್ರು.
ಮುಂಜಾಗೃತಾ ಕ್ರಮವಾಗಿ 3 ಎಸ್ ಡಿ ಆರ್ ಎಫ್, 3 ಎನ್ ಡಿ ಆರ್ ಎಫ್ ತುಕಡಿ ಬಂದಿವೆ. 165 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ನದಿ ತೀರದ ಗ್ರಾಮಗಳಲ್ಲಿ ಎಲ್ಲಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದ್ರು.

ನದಿ ಹಾಗೂ ನದಿ ತೀರಕ್ಕೆ ಜನರು ತೆರಳಬಾರದೆಂದು ಅವರು ಸೂಚನೆ ನೀಡಿದ್ರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ