ಬೆಂಕಿ ತಗುಲಿ ಗುಡಿಸಲು ಭಸ್ಮ

ಮಂಗಳವಾರ, 17 ಮೇ 2022 (20:26 IST)
ಬಳ್ಳಾರಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಗುಡಿಸಲೊಂದು ಹೊತ್ತಿ ಉರಿದಿದೆ..ಬ್ಯಾಲಚಿಂತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಪಾರ ಪ್ರಮಾಣದ ದವಸ-ಧಾನ್ಯ ಸುಟ್ಟು ಕರಕಲಾಗಿದೆ..ರೈತ ಕಗ್ಗಲ್ ಮಲ್ಲಯ್ಯ ಎಂಬುವರಿಗೆ ಸೇರಿದ ಗುಡಿಸಲು ಇದಾಗಿದ್ದು, 50 ಚೀಲ್ ಭತ್ತ, ಜೋಳ ಸೇರಿದಂತೆ ದಿನ ಬಳಕೆ‌ ವಸ್ತುಗಳು ಸುಟ್ಟು ಭಸ್ಮವಾಗಿದೆ..ಅಂದಾಜು 3 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಹೇಳಲಾಗ್ತಿದೆ..ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ