ಬೆಂಕಿ ಕೆನ್ನಾಲಿಗೆಗೆ ಬೃಹತ್ ಅಂಗಡಿ ಭಸ್ಮ
ಬೆಂಕಿಗೆ ಆಟೋ ಮೊಬೈಲ್ಸ್ ಅಂಗಡಿಯೊಂದು ಸುಟ್ಟು ಕರಕಲಾದ ಘಟನೆ ನಡೆದಿದೆ.
ಕೋಲಾರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಟೋ ಮೊಬೈಲ್ಸ್ ಅಂಗಡಿಯೊಂದು ಬೆಂಕಿಗಾಹುತಿಯಾಗಿದೆ.
ಕೋಲಾರ ನಗರದ ಬೈಪಾಸ್ ನಲ್ಲಿರುವ ಆಟೋ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿದೆ.
ವಾಜೀದ್ ಎಂಬುವರಿಗೆ ಸೇರಿದ ಆಟೋಮೊಬೈಲ್ ಅಂಗಡಿ ಇದಾಗಿದೆ. ಭಾನುವಾರ ಬೆಳ್ಳಗ್ಗಿನ ಜಾವ ನಡೆದಿರುವ ಘಟನೆ ಇದಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಆಟೋಮೊಬೈಲ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟುಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು.