ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ವೊಂದನ್ನ ಪೊಲೀಸರು ಬಂಧಿಸಿದ್ದಾರೆ. HAL ಪೊಲೀಸರು ಸೈಯದ್, ಪ್ರತಾಪ್ ಎಂಬ ಇಬ್ಬರನ್ನ ಸೇರಿಸಿ 7 ಜನ ಆರೋಪಿಗಳನ್ನ ಬಂಧಿಸಿದ್ದಾರೆ. HALನಲ್ಲಿ 833 ಎಕರೆ ಭೂಮಿಯ ಲೀಸ್ ಪಡೆದಿರೋದಾಗಿ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿದ್ದರು. ಆರೋಪಿಗಳು ದಾಖಲೆಯಲ್ಲಿ ಅಧಿಕಾರಿಗಳ ಸಹಿಯನ್ನೇ ನಕಲು ಮಾಡಿಕೊಂಡಿದ್ದರು. HAL ಅಧಿಕಾರಿ ದೂರಿನ ಆಧಾರದ ಮೇಲೆ ಪೊಲೀಸರು FIR ದಾಖಲಿಸಿಕೊಂಡು, ಖತರ್ನಾಕ್ ಗ್ಯಾಂಗ್ನ್ನ ಸದೆಬಡಿದಿದ್ದಾರೆ.