RMP ಡಾಕ್ಟರ್ ಮಾಡಿದ ಆ ಕೆಲಸದಿಂದ ಜೀವಬಿಟ್ಟ ಹುಡುಗಿ

ಶುಕ್ರವಾರ, 24 ಏಪ್ರಿಲ್ 2020 (18:12 IST)

ಆರ್ ಎಂ ಪಿ ಡಾಕ್ಟರ್ ಮಾಡಿದ ಆ ಕೆಲಸದಿಂದಾಗಿ ಹುಡುಗಿಯೊಬ್ಬಳು ಸಾವನ್ನಪ್ಪಿದ್ದಾಳೆ.


12 ವರ್ಷದ ಬಾಲಕಿ ಜ್ವರದಿಂದ ಬಳಲುತ್ತಿದ್ದಳು. ಆಗ ಪೋಷಕರು ಆರ್ ಪಿ ಎಂ ಡಾಕ್ಟರ್ ಅಜೀತ್ ಎಂಬಾತನ ಬಳಿಗೆ ಕರೆದುಕೊಂಡು ಹೋಗಿದ್ದಾರೆ.

ಇಂಜೆಕ್ಷನ್, ಮಾತ್ರೆಯನ್ನು ಅಜಿತ್ ನೀಡಿದ್ದಾನೆ. ಆದರೆ ತಡರಾತ್ರಿ ಬಾಲಕಿ ಮನೆಯಲ್ಲಿ ಜೀವ ಬಿಟ್ಟಿದ್ದಾಳೆ.

ಯಾದಗಿರಿಯ ಕೋಳಿಹಾಳ ವ್ಯಾಪ್ತಿಯ ದೊಡ್ಡತಾಂಡಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ವೈದ್ಯನ ವಿರುದ್ಧ ಕೇಸ್ ದಾಖಲಾಗಿದೆ. ನಕಲಿ ವೈದ್ಯನಾಗಿ ಚಿಕಿತ್ಸೆ ನೀಡುತ್ತಿದ್ದ ಅಜೀತ್ ಪಲಾಯನ ಮಾಡಿದ್ದಾನೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ