ಕೋಮು-ಗಲಭೆ ಸೃಷ್ಠಿಸುವುದನ್ನು ಸರ್ಕಾರ ಸಹಿಸಲ್ಲ- ದೇಶಪಾಂಡೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿರುವ ಅವರು, ಕೋಮು- ಗಲಭೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸಂಸದ ಹಾಗೂ ಸಚಿವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಿಕ್ಕ ಅವಕಾಶವನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದಿದ್ದಾರೆ.
ಕೋಮು-ಗಲಭೆ ಸೃಷ್ಠಿಸುವ ಕೆಲಸವನ್ನು ಮಾಡಬಾರದು. ನಾನೂ ಕೂಡ ಹಿಂದೂ ಎಂಬ ಹೆಮ್ಮೆಯಿದ್ದು, ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ಸಹಾಯವನ್ನೂ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.