ಭ್ರೂಣ ಲಿಂಗ ಪತ್ತೆ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಹೈ ಅಲರ್ಟ್

ಗುರುವಾರ, 7 ಡಿಸೆಂಬರ್ 2023 (14:42 IST)
ರಾಜ್ಯದ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳ ಡಿಟೈಲ್ ರಿಪೋರ್ಟ್ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ.ಭ್ರೂಣ ಲಿಂಗ ಪತ್ತೆ ಮಾಡಿರುವ ಸೆಂಟರ್ ಗಳ ವೈದ್ಯರಿಗೆ ಡವ ಡವ ಶುರುವಾಗಿದೆ.ರಾಜ್ಯದ 6000 ಸಾವಿರ ಸ್ಕ್ಯಾನಿಂಗ್ ಸೆಂಟರ್ ಹಾಗೂ ಕ್ಲಿನಿಕ್‌ಗಳ ತಪಾಸಣೆಗೆ ಕಾರ್ಯಾಚರಣೆ ನಡೆದಿದೆ.ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ DHO ಹಾಗೂ CHO ಗಳಿಗೆ ಡೆಡ್ ಲೈನ್ ಕೊಟ್ಟಿದೆ.
 
ರಾಜ್ಯದ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ 6000 ಸ್ಕ್ಯಾನಿಂಗ್ ಸೆಂಟರ್ ನಲ್ಲಿರುವ ಎಲ್ಲ ಮಿಷಿನಗಳನ್ನ ತಪಾಷಣೆ ಮಾಡಬೇಕು .ಅಲ್ಲಿರುವ ನ್ಯೂನ್ಯತೆಗಳನ್ನ ಪರಿಶೀಲನೆ ಮಾಡಬೇಕು.ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿರುವುದು ಬೆಳಕಿಗೆ ಕಂಡು ಬಂದ್ರೆ ತಕ್ಷಣವೇ ಕೇಸ್ ದಾಖಲಿಸಿ ವರದಿ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.ಡಿಸೆಂಬರ್ 30 ರೊಳಗೆ ರಾಜ್ಯದ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳ ನ್ಯೂನೆತೆ ಹಾಗೂ ಎಷ್ಟು ಸ್ಕ್ಯಾನಿಂಗ್ ಮಾಡಲಾಗಿದೆ.ಸ್ಕ್ಯಾನಿಂಗ್ ಮಷಿನ್ ಗಳ ಡಾಟಾ ಇಮೇಜ್ ಸಂಗ್ರಹಿಸುವಂತೆ ಸೂಚನೆ ನೀಡಿದೆ.

ಅನುಮತಿ ಪಡೆಯದಿರುವ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಮಾರ್ಗಸೂಚಿ ಅನ್ವಯ ಸ್ಕ್ಯಾನಿಂಗ್ ನಡೆಸಲಾಗುತ್ತಿದೆಯೇ?ಪಾಲಕರು, ತಾಯಿ ಹೊರತು ಅನ್ಯ ವ್ಯಕ್ತಿಗಳ ಪತ್ತೆಗಾಗಿ ಅಲ್ಲಿಯ ಸಿಸಿ ಕ್ಯಾಮರಾ ಪರಿಶೀಲನೆ ಮಾಡಬೇಕು.ಇಮೇಜ್ ಡಾಟಾ ಹಾಗೂ ಸ್ಕ್ಯಾನಿಂಗ್ ಹಿಸ್ಟರಿ ದತ್ತಾಂಶ ಸಂಗ್ರಹಿಸಲು ಮುಂದಾಗಿದೆ.ರಾಜ್ಯದಲ್ಲಿ ಭ್ರೂಣ ಲಿಂಗ್ ಪತ್ತೆ ವಿರುದ್ಧ ದೊಡ್ಡ ಭೇಟೆಯನ್ನ ಆರೋಗ್ಯ ಇಲಾಖೆ ಶುರು ಮಾಡಿದೆ.ಈ ಬಗ್ಗೆ ಕಂಪ್ಲೀಟ್ ವರದಿ ಪಡೆಯಲು ಮುಂದಾಗಿದ್ದು ,ಎಲ್ಲ ಸ್ಕ್ಯಾನಿಂಗ್ ಮಷಿನ್ ಗಳ ತಪಾಷಣೆಯ ಕಾರ್ಯಚರಣೆ ಶುರು ಮಾಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ