ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಶುಕ್ರವಾರ, 27 ಡಿಸೆಂಬರ್ 2019 (11:01 IST)
ಉಡುಪಿ : ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಇಂದು ಕೂಡ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎನ್ನಲಾಗಿದೆ.


ಶ್ರೀಗಳ ರಕ್ತದೊತ್ತಡ, ಮಧುಮೇಹ ಸಹಜ ಸ್ಥಿತಿಯಲ್ಲಿದೆ. ಕಫ ಬಹುತೇಕ ಕರಗಿದೆ. ಶ್ವಾಸಕೋಶದ ಸಮಸ್ಯೆ ಮಾತ್ರ  ಕಾಣಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

 

ಅಲ್ಲದೇ ಶ್ರೀಗಳಿಗೆ ಚಿಕಿತ್ಸೆ ನೀಡಲು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಇಂದು ಬೆಂಗಳೂರಿನ ತಜ್ಞ ವೈದ್ಯರು ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ