ಪೀಠ ತನ್ನ ತೀರ್ಪಿನಲ್ಲಿ, ದೇವಸ್ಥಾನದ ಛಾವಣಿಯಲ್ಲಿ ನೀರು ಸೋರುತ್ತಿರುವುದರಿಂದ ಮೊದಲನೇ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಧಿಕಾರಿ ಮತ್ತು ಮುಜರಾಯಿ ಅಧಿಕಾರಿ ತೀರ್ಮಾನಿಸಿದ್ದಾರೆ. ಆದರೆ, ಮೊದಲನೆ ಮಹಡಿ ನಿರ್ಮಿಸಿದರೆ ದೇವಸ್ಥಾನದ ಸ್ವರೂಪವೇ ಹಾಳಾಗಲಿದೆ. ದೇವಸ್ಥಾನದ ಧ್ವಜಸ್ತಂಭದ ಮೇಲೆ ಯಾವುದೇ ನಿರ್ಮಾಣ ಕಾಮಗಾರಿ ನಡೆಸಲು ಅನುಮತಿಗೆ ಅವಕಾಶವಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಜೊತೆಗೆ, ಅನೇಕ ದೇವಸ್ಥಾನಗಳಿಗೆ ಯಾವುದೇ ಹಾನಿಯಾಗದಂತೆ ನೀರು ಸೋರುವುದನ್ನು ನಿಲ್ಲಿಸಲು ಅತ್ಯುತ್ತಮ ವಿಧಾನಗಳಿವೆ. ಅದೇ ಗ್ರಾಮದ ವಾಗೀಶ್ ಪಾಟೀಲ್ ಎಂಬವರು ಈ ಹಿಂದೆ ಸುಮಾರು 15 ಲಕ್ಷ ರೂ. ಖರ್ಚಿನಲ್ಲಿ ದೇವಸ್ಥಾನದ ರಿಪೇರಿ ಕೆಲಸ ಮಾಡಿದೆ. ಸೋರಿಕೆ ದುರಸ್ಥಿ ಕೆಲಸವನ್ನೂ ನೀಡುವ ಭರವಸೆ ನೀಡುವುದಾಗಿ ಅರ್ಜಿದಾರರೇ ಹೇಳಿದ್ದಾರೆ. ಆದ್ದರಿಂದ, ದೇವಸ್ಥಾನದ ಮೇಲೆ ಯಾವುದೇ ನಿರ್ಮಾಣ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿಸಬಾರದು. ಸಂಗ್ರಹಿಸಿದ ಖರ್ಚಿನಲ್ಲಿ ನೀರು ಸೋರದಂತೆ ಉತ್ಪನ್ನ ದುರಸ್ಥಿ ಮಾಡಿಕೊಡಲು ವಾಗೀಶ್ ಪಾಟೀಲ್ ಅವರ ಕೋರಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ ಪೀಠ ಅರ್ಜಿ ಇತ್ಯರ್ಥಪಡಿಸಿದೆ.