ಸೆಕ್ಯುರಿಟಿ ಗಾರ್ಡ್ ನ ಕೊಲೆ ಮಾಡಿ ಮನೆ ದರೋಡೆ
ಸೆಕ್ಯುರಿಟಿ ಗಾರ್ಡ್ ನ ಕೊಲೆ ಮಾಡಿ ಮನೆ ದರೋಡೆ ಮಾಡಿರುವ ಘಟನೆಬೆಂಗಳೂರಿನ ಕೋರಮಂಗಲದ 6th ಬ್ಲಾಕ್ ನಲ್ಲಿ ನಡೆದಿದೆ.45 ವರ್ಷದ ಅಸ್ಸಾಂ ಮೂಲದ ಸೆಕ್ಯುರಿಟಿ ಗಾರ್ಡ್ ನ ದುಷ್ಕರ್ಮಿಗಳು ಕೊಲೆ ಮಾಡಿದಾರೆ.ಮನೆ ಮಾಲೀಕರು ನಿನ್ನೆ ಕುಟುಂಬ ಸಂಬಂಧಿಕರ ಮದುವೆಗೆ ಹೋಗಿದ್ದರು.ಈ ವೇಳೆ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಮಾತ್ರ ಇದ್ದ. ಈ ವೇಳೆ ಸೆಕ್ಯುರಿಟಿ ಗಾರ್ಡ್ ನ ಕೊಲೆ ಮಾಡಿ ಮನೆಯನ್ನ ದುಷ್ಕರ್ಮಿಗಳು ದೋಚಿದ್ದಾರೆ.ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.