ಮದುವೆ ಮಾಡದ ಮಕ್ಕಳು: ನೇಣಿಗೆ ಶರಣಾದ ಅಪ್ಪ - ತಪ್ಪದೇ ಓದಿ
ಆ ತಂದೆ ತನ್ನ ಎಲ್ಲಾ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದ. ಆದರೆ ತನ್ನ ಮಕ್ಕಳು ತನಗೆ 2ನೇ ಮದುವೆ ಮಾಡಲಿಲ್ಲ ಅಂತ ರೋಸಿಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆ ವೃದ್ಧನ ಪತ್ನಿ ಸಾವನ್ನಪ್ಪಿದ್ದರು. ಆತನಿಗೆ ಎಂಟು ಮಕ್ಕಳು, ಮೊಮ್ಮಕ್ಕಳಿದ್ದಾರೆ. ಎಲ್ಲ ಮಕ್ಕಳಿಗೆ ಮದುವೆಯಾಗಿ ಮಕ್ಕಳಿವೆ. ಆದರೆ ಪತ್ನಿ ಇಲ್ಲದ ವೃದ್ಧ ಎರಡನೇ ಮದುವೆಗೆ ಮುಂದಾಗಿದ್ದಾನೆ.
ಆದರೆ ಇದಕ್ಕೆ ಮನೆ ಮಂದಿ ವಿರೋಧ ಮಾಡಿದ್ದಾರೆ.
ಹೀಗಾಗಿ ವೃದ್ಧ ಅರ್ಷದ ಎಂಬೋರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಈ ವಿಚಿತ್ರವಾದ ಘಟನೆಯು ನಡೆದಿದೆ.