ವೈದ್ಯ ಲೋಕವನ್ನು ಬೆಚ್ಚಿ ಬೀಳಿಸುವಂತಿದೆ ICMR ಅಧ್ಯಯನದ ಫಲಿತಾಂಶ
ಭಾನುವಾರ, 3 ಸೆಪ್ಟಂಬರ್ 2023 (18:58 IST)
ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಹರಸಾಹಸದಿಂದ ಕೋವಿಡ್ ಎಂಬ ಮಹಾಮಾರಿಯ ನಾಗಲೋಟದ ಓಟಕ್ಕೆ ಬ್ರೇಕ್ ಹಾಕಲಾಗಿತ್ತು. ಸದ್ಯ ಇದೀಗಾ ಕೋವಿಡ್ 19 ಸಂಪೂರ್ಣ ವಾಗಿ ಹತೋಟಿಗೆ ಬಂದಿದೆ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಯಾವುದೇ ರೀತಿಯ ಕೋವಿಡ್ ಕೇಸ್ ಗಳು ಪತ್ತೆಯಾಗಿಲ್ಲ.ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 5 ಮಂದಿ ಮಾತ್ರ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿರುವ ರೋಗಿಗಳ ಸಂಖ್ಯೆ ಶೇಕಾಡ 99.00 ಏರಿಕೆಯಾಗಿದೆ. ಈ ಮದ್ಯೆ ICMR ಅಧ್ಯಯನದ ವರದಿಯೊಂದು ಬಿಡುಗಡೆಯಾಗಿದ್ದು ಕೋವಿಡ್ ನಿಂದ ಗುಣಮುಖರಾಗಿರುವ ರೋಗಿಗಳಿಗೆ ಶಾಕ್ ನೀಡಿದು ಮಾತ್ರವಲ್ಲದೇ ವೈದ್ಯ ಲೋಕವನ್ನು ಬೆಚ್ಚಿಬೀಳಿಸಿದೆ.ಭಾರತೀಯ ವೈದ್ಯಕೀಯ ಸಂಶೋಧನಾ ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಶಾಕಿಂಗ್ ಸಂಗತಿಯೊಂದು ಬೆಳಕಿಗೆ ಬಂದಿದೆ.ಕೊವಿಡ್ ನಿಂದ ಡಿಸ್ಚಾರ್ಜ್ ಆದ ಒಂದೇ ವರ್ಷದೊಳಗೆ ಶೇ.6.5ರಷ್ಟು ಕೋವಿಡ್ ರೋಗಿಗಳ ಸಾವಾಗಿರೋ ಬಗ್ಗೆ ICMR ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಕೋವಿಡ್ ನಿಂದಾ ಗುಣಮುಖರಾದೋರಿಗೆ ನಾನ ರೀತಿಯ ಕಾಯಿಲೆಗಳು ಕಾಡಲು ಆರಂಭಿಸಿದೆ. ಹೃದಯ,ಶ್ವಾಸಕೋಶ ಸಂಭಂದಿ ಕಾಯಿಲ್ ಕೋವಿಡ್ ರಿಕಾವರಿ ರೋಗಿಗಳು ತುತ್ತಾಗುತ್ತಿದ್ದು ಸಡನ್ ಹೃದಾಯಘಾತ,ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗಿದೆ.ಕೋವಿಡ್ ವೈರಸ್ ಗಳು ದೇಹದ ಮೇಲೆ ಮಾಡಿರೋ ಡ್ಯಾಮೇಜ್ ನಿಂದ ಆರೋಗ್ಯದಲ್ಲಿ ಏರಿಳಿತಾವಾಗುತ್ತಿದ್ದು ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ.ಇನ್ನೂ ಕೋವಿಡ್ ಆರಂಭದಲ್ಲಿ ಗುಣಮುಖರಾದ ರೋಗಿಗಳ ಸ್ಥಿತಿಗತಿಗಳ ಬಗ್ಗೆ ICMR ಫೋನ್ ಮೂಲಕ ವಿಚಾರಣೆ ನಡೆಸಿ ವರದಿ ತಾಯಾರಿಸಿದ್ದು ಎಲ್ಲಾರನ್ನು ಬೆಚ್ಚಿಬೀಳಿಸಿದೆ.