ಐಎಂಎ ಹಗರಣ; ಗುಂಡುರಾವ್ ಭೇಟಿ ಮಾಡಿದ ಜಮೀರ್ ಹೇಳಿದ್ದೇನು?

ಶನಿವಾರ, 15 ಜೂನ್ 2019 (18:09 IST)
ಐಎಂಎ ಹಗರಣದ ಕುರಿತು ಬಿಜೆಪಿ ಪ್ರತಿಭಟನೆ ಹಾದಿ ತುಳಿದಿರುವಾಗಲೇ ಕೆಪಿಸಿಸಿ ಅಧ್ಯಕ್ಷರನ್ನು ಸಚಿವ ಜಮೀರ್ ಅಹ್ಮದ್ ಭೇಟಿ ಮಾಡಿದ್ದಾರೆ.

ಕೆಪಿಸಿಸಿಯಲ್ಲಿ ದಿನೇಶ್ ಗುಂಡುರಾವ್ ಭೇಟಿ ಮಾಡಿದ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿದ್ದು,
ದಿನೇಶ್ ಜತೆ ಐಎಂಎ ಬಗ್ಗೆ ಮಾತುಕತೆ ನಡೆಸಲಾಗಿದೆ. ಇದುವರೆಗೂ ಆಗಿರೋ ತನಿಖೆ ಬಗ್ಗೆ ಮಾಹಿತಿ ನೀಡಿದ್ದೇನೆ. ರೋಷನ ಬೇಗ್ ಪಾತ್ರ ಇದೆ ಅನ್ನೋದಕ್ಕೆ ದಾಖಲೆ ಬೇಕು. ಆಡಿಯೋದಲ್ಲಿ ಅವರ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನ ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದು ಮನ್ಸೂರ್ ಧ್ವನಿ ಅನ್ನೋದು ಸಾಬೀತಾದ್ರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದರು.

ಇನ್ನು ಜಮೀರ್ ಬಂಧನದ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆ.ಎಸ್.ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡಬಾರದು. ದಾಖಲೆ ಇದ್ರೆ ಮಾತನಾಡಬೇಕು. ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ದಾಖಲೆ ಕೊಟ್ರೆ ಅವರು ಏನ್ ಹೇಳ್ತಾರೋ ಅದನ್ನ ಕೇಳ್ತಿನಿ ಎಂದ್ರು.

ಎಎಸ್ ಐಟಿ ತನಿಖೆ ನಡಿತಾ ಇದೆ. ನಮ್ಮ ಅಧಿಕಾರಿಗಳ ಮೇಲೆ ವಿಶ್ವಾಸ ಇದೆ. ಒಂದು ವೇಳೆ ಆಗಿಲ್ಲ ಅಂದ್ರೆ ಆಮೇಲೆ ನೋಡೋಣ ಎಂದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ