'ದಿ ಕಾಶ್ಮೀರ್​ ಫೈಲ್ಸ್​' ಸಿನಿಮಾ ವೀಕ್ಷಿಸಲು ಆಹ್ವಾನ

ಸೋಮವಾರ, 14 ಮಾರ್ಚ್ 2022 (17:29 IST)
ದೇಶದೆಲ್ಲೆಡೆ ಉತ್ತಮ​ ಪ್ರದರ್ಶನ ಕಾಣುತ್ತಿರುವ 'ದಿ ಕಾಶ್ಮೀರ್​ ಫೈಲ್ಸ್​' ಸಿನಿಮಾವನ್ನು ವೀಕ್ಷಿಸಲು ಕರ್ನಾಟಕದ ಸಚಿವರು, ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಸದನದಲ್ಲಿ ಎಲ್ಲ ಸದಸ್ಯರಿಗೆ ಸ್ಪೀಕರ್ ಕಾಗೇರಿ ಆಹ್ವಾನ ನೀಡಿದ್ದಾರೆ
.ಸಂಜೆ 6.45ಕ್ಕೆ ಬೆಂಗಳೂರಿನ ಮಂತ್ರಿ ಮಾಲ್​ನಲ್ಲಿ ಸಚಿವರು, ಶಾಸಕರು 'ದಿ ಕಾಶ್ಮೀರ್​ ಫೈಲ್ಸ್​' ಸಿನಿಮಾ ವೀಕ್ಷಿಸಲಿದ್ದು, ವಿಧಾನಸಭೆ ಸಚಿವಾಲಯದಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಿನಿಮಾ ನೋಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.
 
ವಿಪಕ್ಷ ಶಾಸಕರನ್ನು ಕೂಡ 'ದಿ ಕಾಶ್ಮೀರ್​ ಫೈಲ್ಸ್' ಚಿತ್ರ ವೀಕ್ಷಣೆಗೆ ಆಹ್ವಾನಿಸುವ ಮೂಲಕ ಸ್ಪೀಕರ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈ ಸಿನಿಮಾದ ಬಗ್ಗೆ ದೇಶದಲ್ಲಿ ಪರ ಮತ್ತು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪೀಕರ್ ಈ ನಡೆ ಭಾರೀ ಅಚ್ಚರಿಗೆ ಕಾರಣವಾಗಿದೆ. ನೆನ್ನೆಯಷ್ಟೇ ಈ ಸಿನಿಮಾವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಕೆಲವು ಮಂತ್ರಿಗಳು ವೀಕ್ಷಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ