ಪತ್ನಿಯ ಐಷಾರಾಮಿ ಜೀವನದ ಆಸೆಗೆ ಬಲಿಯಾಯ್ತು ಪತಿಯ ಪ್ರಾಣ

ಶನಿವಾರ, 14 ಡಿಸೆಂಬರ್ 2019 (10:49 IST)
ಬೆಂಗಳೂರು : ಪತ್ನಿಯ ಕಿರುಕುಳ ತಾಳಲಾರದೆ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಶ್ರೀನಾದ್ (39) ಆತ್ಮಹತ್ಯೆ ಮಾಡಿಕೊಂಡ ಪತಿ. ಖಾಸಗಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಆಂಧ್ರಪ್ರದೇಶ ಮೂಲದ ಶ್ರೀನಾದ್, ರೇಖಾ ಎಂಬ ಯುವತಿಯ ಜೊತೆ ಮದುವೆಯಾಗಿದ್ದರು. ಐಷಾರಾಮಿ ಜೀವನ ನಡೆಸುವ ಹಾಗೂ ದುಂದುವೆಚ್ಚ ಮಾಡುವ ಗುಣವಿರುವ ರೇಖಾಗೆ ಬುದ್ಧಿ ಹೇಳಿದಕ್ಕೆ ಆಕೆ  ಪತಿಯ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾಳೆ. ಇದರಿಂದ ನೊಂದ ಶ್ರೀನಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಈ ಬಗ್ಗೆ ಶ್ರೀನಾದ್ ತಂದೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ರೇಖಾ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ