ಬೆಂಗಳೂರು-11.51 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡ ಮತ್ತೊಂದು ಪ್ರತಿಷ್ಠಿತ ಮಾಲ್ ಗೆ ಶಾಕ್ ಎದುರಾಗಿದೆ.ಬಿಬಿಎಂಪಿಯ ದಾಸರಹಳ್ಳಿ ವಲಯದ ಜಾಲಹಳ್ಳಿ ಕ್ರಾಸ್‌ನಲ್ಲಿರುವ ರಾಕ್‌ಲೈನ್ ಮಾಲ್ ಗೆ ಬೀಗ ಜಡಿಯಾಲಾಗಿದೆ.ಬೆಳ್ಳಂ ಬೆಳಗ್ಗೆ ಫೀಲ್ಡ್ ಗಿಳಿದ ಬಿಬಿಎಂಪಿ ಅಧಿಲಾರಿಗಳು ರಾಕ್‌ಲೈನ್ ಮಾಲ್ ಸೀಜ್ ಮಾಡಿದ್ದಾರೆ.ರಾಕ್ ಲೈನ್ ಮಾಲ್ ನಿಂದ 2011 ರಿಂದ 2022-23 ರವರೆಗೆ ಬಾಕಿ ಉಳಿಸಿಕೊಂಡಿರುವ 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ತೆರಿಗೆ ಪಾವತಿಸಲು ಈಗಾಗಲೇ ಡಿಮಾಂಡ್ ನೋಟೀಸ್ ನೀಡಲಾಗಿತ್ತು.
ಇಂದು ದಾಸರಹಳ್ಳಿ ವಲಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಾಕ್ ಲೈನ್ ಮಾಲ್ ಲಾಕ್ ಮಾಡಲಾಗಿದೆ.ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತರಾದ ಬಾಲಶೇಖರ್ ದಾಸರಹಳ್ಳಿ ವಲಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾರ್ಷಲ್ ಗಳು ನೇತೃತ್ವದಲ್ಲಿ ಮಾಲ್ ನ್ನ ಸೀಜ್ ಮಾಡಿದ್ದಾರೆ.