ಆ ಕೆಲಸ ಮಾಡಿದ ವ್ಯಕ್ತಿಗೆ ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ ಮಹಿಳೆ

ಶುಕ್ರವಾರ, 3 ಜನವರಿ 2020 (15:05 IST)
ವ್ಯಕ್ತಿಯೊಬ್ಬ ಮಾಡಬಾರದ ಕೆಲಸ ಮಾಡಿದ್ದಕ್ಕೆ ಮಹಿಳೆಯೊಬ್ಬಳು ನಡುರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಿದ್ದಾಳೆ.

ಸುಂದರೇಶ್ ಎಂಬಾತನೇ ಮಹಿಳೆಯಿಂದ ಧರ್ಮದೇಟು ತಿಂದ ಭೂಪನಾಗಿದ್ದಾನೆ.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಜಯಪರದ ಸುಂದರೇಶ್ ಅದೇ ಗ್ರಾಮದ ಮಹಿಳೆಯೊಬ್ಬಳ ಶೀಲದ ಕುರಿತು ಅಸಹ್ಯವಾಗಿ ಅವರಿವರ ಹತ್ತಿರ ಮಾತನಾಡುತ್ತಿದ್ದನಂತೆ.

ಸುಂದರೇಶ್ ವಿರುದ್ಧ ಮಹಿಳೆ ಕೇಸ್ ಹಾಕಿದ್ದಳು. ಬೇಲ್ ಪಡೆದ ಬಂದ ಸುಂದರೇಶ್ ಮತ್ತೆ ತನ್ನ ಕೆಲಸ ಮುಂದುವರಿಸಿ ಮಹಿಳೆಯ ಶೀಲದ ಬಗ್ಗೆ ಅಪಪ್ರಚಾರ ನಡೆಸಿದ್ದಾನೆ.

ಇದರಿಂದ ಕೆರಳಿದ ಮಹಿಳೆ ನಡುರೋಡ್ ನಲ್ಲೇ ಸುಂದರೇಶ್ ನಿಗೆ ಸರಿಯಾಗಿ ಥಳಿಸಿದ್ದಾಳೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ