ಕೊರೊನಾ ಕಳೆದ ಮೂರು ವರ್ಷಗಳಿಂದ ರಾಜ್ಯದ ಮನೆ ಮನೆಗಳಲ್ಲಿ ಮನೆಯ ಮಗನಂತೆ ಒಕ್ಕರಿಸಿಕೊಂಡು, ನೂರಾರು ಜನರ ಬದುಕು ಬಿದಿಗೆ ತಂದಿದ್ದಾನೆ. ಇನ್ನೇನು ಕಡಿಮೆ ಆಯ್ತು ಅನ್ನುವಷ್ಟರಲ್ಲಿ ಇದೀಗ ಮತ್ತೆ ಸುಂಟರಗಾಳಿಯಂತೆ ದೇಶಾದ್ಯಂತ ವ್ಯಾಪಿಸಿದ್ದಾನೆ. ಇನ್ನೂ ಜನರು ಮಾತ್ರ ಕೊರೊನಾ ಇಲ್ಲ ಎಂದು ನಿರ್ಲಕ್ಷ ವಹಿಸಿದ್ದು, ಆರೋಗ್ಯ ಇಲಾಖೆ ಮತ್ತೆ ದಂಡ ಅಸ್ತ್ರ ಪ್ರಯೋಗಕೆ ಮುಂದಾಗಿದೆ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಕೋವಿಡ್-19 ಪ್ರಕರಣಗಳಲ್ಲಿ ಕೊಂಚ ಏರಿಕೆ ಜೊತೆಗೆ ಜುಲೈ ತಿಂಗಳನಲ್ಲಿ 4 ನೇ ಅಲೆ ಆತಂಕ ಇರುವುದರಿಂದ ಮತ್ತೆ ಫುಲ್ ಅಲರ್ಟ್ ಆಗಿದೆ. ಇತ್ತ ಸಾರ್ವನಿಕರಿಗೆ ಇಷ್ಟೇ ಮನವಿ ಮಾಡಿದ್ರು, ಕೋವಿಡ್ ನಿಯಮ ಪಾಲನೆ ಮಾಡ್ತಿಲ್ಲ. ಹೀಗಾಗಿ ಮತ್ತೆ ಆರೋಗ್ಯ ಇಲಾಖೆ ದಂಡ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.
ಕಳೆದ ತಿಂಗಳು ಸರ್ಕಾರ ಸಾರ್ವಜನಿಕ ಸ್ಥಾಳಗಳಲ್ಲಿ ಮಾಸ್ಕ ಕಡ್ಡಾಯ ಎಂದು ಆದೇಶ ಮಾಡಿತ್ತು. ಆದ್ರೆ ಸರ್ಕಾರ ಆದೇಶಕ್ಕೆ ಸಾರ್ವಜನಿಕರು ಕ್ಯಾರೆ ಅನ್ನುತ್ತಿಲ್ಲ..ಮಾಸ್ಕ ಇಲ್ಲದೆ ಜನರು ಓಡಾಟ ಜೋರಾಗಿದೆ. ಹೀಗಾಗಿ ತಂತ್ರಿಕ ಸಲಹಾ ಸಮಿತಿ ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗಿಸಿ ಎಂದು ಸಲಹೆ ನೀಡಿದೆ. ಇನ್ನೂ ತಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನ ಪರಿಗಣಿಸಿ ನಾಳೆ ವೇಳೆಗೆ ಸರ್ಕಾರಕ್ಕೆ ದಂಡ ಪ್ರಸ್ತಾವನೆ ವರದಿಯನ್ನ ಆರೋಗ್ಯ ಇಲಾಖೆ ಸಲ್ಲಿಸಲು ಮುಂದಾಗಿದೆ. ಇನ್ನೂ ಬಗ್ಗೆ ಮಾತನಾಡಿದ ಆರೋಗ್ಯ ಇಲಾಖೆ ಕಮೀಷನರ್ ರಂದೀಪ್, ನಾವು ವರದಿ ಸಕಾರಕ್ಕೆ ನಾಳೆ ಕೊಡಲಿದ್ದೇವೆ. ಮಾಸ್ಕ್ ದಂಡದ ಬಗ್ಗೆ ಸರ್ಕಾರ ತೀರ್ಮಾನ ಅಂತಿಮ. ದಂಡದ ಪ್ರಸ್ತಾವನೆ ಕುರಿತು ಸರ್ಕಾರದ ಮಟ್ಟದಲ್ಲಿ ಸಭೆ ನಡೆಯುತ್ತೆ. ಸರ್ಕಾರ ಮಾಸ್ಕ್ ದಂಡದ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದು, ಈ ವಾರದಲ್ಲಿಯೇ ಸರ್ಕಾರದಿಂದ ಮಾಸ್ಕ್ ದಂಡದ ಬಗ್ಗೆ ನಿರ್ಧಾರ ಸಾಧ್ಯತೆ ಎಂದು ಹೇಳಿದ್ರು.ಮತ್ತೆ ಕೇಸ್ ಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಇತ್ತ ಮದುವೆ, ಸಮಾರಂಭಗಳು ಮಾಸ್ಕ್ ಇಲ್ದೆ ನಡೆಯುತ್ತಿದ್ದು, ನಾಲ್ಕನೆ ಅಲೆಯ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂದಿನ ವಾರ ಮತ್ತೆ ಮಾರ್ಷಲ್ ಗಳು ರೋಡ್ಗೆ ಇಳಿಯಲಿದ್ದು, ಸಿಟಿಯ ಜನರೇ ಎಚ್ಚವಹಿಸಿ