ಮಹಾರಾಷ್ಟ್ರದಿಂದ ವಲಸಿಗರು ಬರೋದೇ ಬೇಡ ಎಂದಿದ್ದ ಸಚಿವ

ಶನಿವಾರ, 23 ಮೇ 2020 (19:12 IST)
ಮಹಾರಾಷ್ಟ್ರದಿಂದ ವಲಸಿಗರ ಆಗಮನಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಮಾನವೀಯತೆ ದೃಷ್ಟಿಯಿಂದ ಅವರು ಬಂದಿದ್ದಾರೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿರುವ 20 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.

ಶುಕ್ರವಾರ 47 ಮಂದಿಗೆ ಸೋಂಕು ದೃಢವಾಗಿತ್ತು. ಶನಿವಾರ 20 ಮಂದಿಗೆ ಕೊರೊನಾ ಬಂದಿದ್ದು, ಸದ್ಯ ಹಳೆಯ 26 ಸೇರಿದಂತೆ ಒಟ್ಟು 93 ಪ್ರಕರಣಗಳಾಗಿವೆ.  

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಮಹಾರಾಷ್ಟ್ರದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ವಲಸಿಗರ ಆಗಮನಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಮಾನವೀಯತೆ ದೃಷ್ಟಿಯಿಂದ 7 - 8 ಬಸ್ ಗಳ ಮೂಲಕ 275 ಮಂದಿ ಜಿಲ್ಲೆಗೆ ಆಗಮಿಸಿದರು. ಈಗ ಅವರಲ್ಲಿ ಸೋಂಕು ಹೆಚ್ಚಾಗಿದೆ ಎಂದಿದ್ದಾರೆ.

ಇನ್ನೂ 163 ಮಂದಿಯ ವರದಿ ಬರಬೇಕಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 100 ರಿಂದ 125 ಆದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ