ವಲಸಿಗರಲ್ಲಿ ಕೊರೊನಾ ನೆಗಟಿವ್ ಬಂದರೆ ಎಲ್ಲಿ ಹೋಗ್ಬೇಕು?
ಮಹಾರಾಷ್ಟ್ರ ಮತ್ತಿತರ ಕಡೆಯಿಂದ ಆಗಮಿಸಿ ವಿವಿಧೆಡೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ವಲಸಿಗರ ಪೈಕಿ ಕೋವಿಡ್-19 ನೆಗೆಟಿವ್ ಬಂದಿರುವ ಕಾರ್ಮಿಕರನ್ನು ಅವರವರ ಮನೆಗಳಿಗೆ ಕಳುಹಿಸಿ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ.
ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವವರಲ್ಲಿ ಪಾಸಿಟಿವ್ ಬಂದಿರುವವರಿಗೆ ಇಎಸ್ಐಸಿ ಮತ್ತು ಜಿಮ್ಸ್ ಕೋವಿಡ್- 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಗಟಿವ್ ವರದಿ ಬಂದಿರುವವರು ಮನೆಗೆ ತೆರಳಬಹುದು. ಆದರೆ, ಆರೋಗ್ಯ ಇಲಾಖೆ ಸೂಚಿಸಿರುವಷ್ಟು ದಿನಗಳು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಬೇಕು. ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ವಲಸಿಗರಿಗೆ ಸಲಹೆ ನೀಡಿದ್ದಾರೆ.