ಸರ್ಕಾರಿ ಶಾಲೆಗೆ ಬೀಗ ಜಡಿದ ಕಿಡಿಗೇಡಿಗಳು ಇಡೀ ದಿನ ಬೀದಿಯಲ್ಲಿ ಕೂತು ಪಾಠ ಕೇಳಿದ ಮಕ್ಕಳು

ಮಂಗಳವಾರ, 24 ಜನವರಿ 2023 (18:33 IST)
ನಗರಾಭಿವೃದ್ಧಿ ಸಚಿವರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗೆ ರಕ್ಷಣೆ ಇಲ್ಲದಂತಾಗಿದೆ ಹೌದು ಬೆಂಗಳೂರಿನ ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಮಹದೇವಪುರ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಬೀಗ ಜಡಿದ ಪರಿಣಾಮ ಶಾಲಾ ಮಕ್ಕಳು ದಿನಪೂರ್ತಿ ಶಾಲೆಯ ಹೊರಗಡೆ ಕೂತು ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಹೌದು ಕೆಆರ್ ಪುರದ ಮಹದೇವಪುರ ಗ್ರಾಮದಲ್ಲಿ 1964 ರಿಂದ ಸರ್ಕಾರಿ ಶಾಲೆ ನಡೆದುಕೊಂಡು ಬಂದಿದೆ ಆದರೆ ಈ ನಡುವೆ ಕೆಲ ಕಿಟಿಗೇಡಿಗಳು ಆ ಸ್ಥಳ ತಮ್ಮದೆಂದು ಕೋರ್ಟಿನಲ್ಲಿ ದಾವೆ ಹೊಡೆದರು ಅದಾದ ನಂತರ ನ್ಯಾಯಾಲಯ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಪ್ರಕರಣವನ್ನು ನ್ಯಾಯಾಲಯದಲ್ಲಿ ಮಾಡುವಂತೆ ಆದೇಶ ನೀಡಿದೆ ಈ ವಿಚಾರವಾಗಿ ಎಲ್ಲ ದಾಖಲಾತಿಗಳನ್ನು ಈಗಾಗಲೇ ಶಿಕ್ಷಣಾಧಿಕಾರಿಗಳ ತಂಡ ನ್ಯಾಯಾಲಯದ ಮುಂದಿಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದು ಭಾನುವಾರ ಕಿಡಿಗೇಡಿಗಳು ಬಂದು ಶಾಲೆಗೆ ಬೀಗ ಹಾಕಿದ್ದಾರೆ ... ಈ ಮೂಲಕ ನ್ಯಾಯಾಲಯದ ಆದೇಶಕ್ಕೆ ಕಿಂಚಿತ್ತೂ ಬೆಲೆ ನೀಡಿರುವುದಿಲ್ಲ .. ಇದರಿಂದ ಸೋಮವಾರ  ದಿನ ಪೂರ್ತಿ ಶಾಲೆಯ ಹೊರ ಕೂತು ಶಾಲಾ ಮಕ್ಕಳು ಪಾಠ ಕೇಳಯವಂತಹ ಪರಿಸ್ಥಿತಿ ನಿರ್ಮಾಣವಾಗಿದೆ . ಈ ಪ್ರಕರಣ ಸಂಭಂದ ಮಹದೇವಪುರ ಪೋಲೀಸ್ ಠಾಣೆಯಲ್ಲಿ ಬಿಇಒ ದೂರು ದಾಖಲಿಸಿದ್ದಾರೆ ಆದರೆ ಮಹಾದೇವಪುರ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ಮಾಡಿರೋ ಹಿನ್ನೆಲೆ ನೆನ್ನೆ ಭಾನುವಾರ ರಾತ್ರಿ ಏಕಾಯಕಿ ಶಾಲೆಗೆ ಬೀಗ ಹಾಕಿ ಹೋಗಿದ್ದಾರೆ ಕಿಡಿಗೇಡಿಗಳು ಇನ್ನಾದರೂ ನಗರಾಭಿವೃದ್ಧಿ ಸಚಿವರ ಮತ್ತು ಶಾಸಕ ಅರವಿಂದ್ ನಿಂಬಾವಳಿ ಕ್ಷೇತ್ರದಲ್ಲೇ ಸರ್ಕಾರಿ ಶಾಲೆಗೆ ರಕ್ಷಣೆ ಇಲ್ಲದಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಈ ವಿಷಯವಾಗಿ ಅಧಿಕಾರಿಗಳು ಹಾಗು ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳಬೇಕಿದೆ . ನ್ಯಾಯಾಲಯದ ತೀರ್ಪು ಬರೋ ತನಕ ಆದ್ರೂ ಮಕ್ಕಳಿಗೆ ಪಾಠ ಕೇಳಲು ಪೊಲೀಸರು ಅವಕಾಶ ಕೊಡಬೇಕು ಎಂದು ಪೋಷಕರ ಮನವಿ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ