ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡು ಶಾಲೆಗೆ ಸೇರಿಸಿದ ಪೋಷಕರು ರಸ್ತೆಯಲ್ಲಿ ಗಲಾಟೆ
ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡು ಶಾಲೆಗೆ ಸೇರಿಸಿದ ಪೋಷಕರು ರಸ್ತೆಯಲ್ಲಿ ನಿಂತು ನ್ಯಾಯಕ್ಕಾಗಿ ಆಗ್ರಹ ಮಾಡುತ್ತಿರುವ ಘಟನೆ ನಗರದ ನಾಗರಬಾವಿಯಲ್ಲಿರುವ ಆರ್ಕಿಡ್ ಸ್ಕೂಲ್ ಬಳಿ ನಡೆದಿದೆ. ಶಾಲೆಯ ಆಡಳಿತ ಮಂಡಳಿಯ ಮೋಸದಾಟ ತಿಳಿಯುತ್ತಿದ್ದಂತೆ ಶಾಲೆಯ ಬಳಿ ಜಮಾಯಿಸಿದ್ದ ಪೋಷಕರು ಶಾಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಲಕ್ಷಾಂತರ ರೂಪಾಯಿ ಕೊಟ್ಟು ಏನು ಮಾಡಲಾಗದೇ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ನಾಗರಬಾವಿಯ ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ಗೆ ಹಲವು ಪೋಷಕರು ತಮ್ಮ ಮಕ್ಕಳನ್ನು ಸೇರಿದ್ದರು. ಸಿಬಿಎಸ್ಸಿ Affiliation ಇಲ್ಲದೇ ಆಡಳಿತ ಮಂಡಳಿ ಕಳ್ಳಾಟ ನಡೆಸಿದ್ದು, ನಮ್ಮ ಶಾಲೆ ಸಿಬಿಎಸ್ಸಿ ಸಿಲಬಸ್ ಹೊಂದಿದೆ ಎಂದು ಹೇಳಿ ಪೋಷಕರಿಂದ ಲಕ್ಷಾಂತರ ರೂಪಾಯಿ ಫೀಸ್ ವಸೂಲಿ ಮಾಡಿದ್ದಾರಂತೆ. ಆದರೆ ಈಗ ಸರ್ಕಾರ 8ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾದ ವೇಳೆ ಶಾಲಾ ಆಡಳಿತ ಮಂಡಳಿಯ ದೋಖಾ ಬೆಳಕಿಗೆ ಬಂದಿದೆ.