ಕಾನೂನು ಬಾಹಿರ ತುಂಬಿದ ಮರಳು: ಸಿಎಂಗೆ ತಾಕತ್ತಿದ್ರೆ ನನ್ನ ವಿರುದ್ಧ ಕೇಸ್ ಹಾಕಲಿ ಎಂದ ಶಾಸಕ

ಸೋಮವಾರ, 19 ನವೆಂಬರ್ 2018 (16:10 IST)
ಅಲ್ಲಿ ಶಾಸಕರು ಕಾನೂನು ಬಾಹಿರ ಮರಳನ್ನು ತುಂಬಿದರು. ನೂರಾರು ಎತ್ತಿನಗಾಡಿ ಮೂಲಕ ಮರಳು ತುಂಬಿದರು. ತಾಕತ್ ಇದ್ದರೆ ಸಿಎಂ ನನ್ನ ವಿರುದ್ಧ ಕೇಸ್ ಹಾಕಲಿ ಎಂದು ಸವಾಲೆಸೆದರು.

ಕಾನೂನು ಬಾಹಿರ ಮರಳು ತುಂಬಿ ವಿಜಯೋತ್ಸವ ಆಚರಿಸಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಡಳಿತ ವೈಖರಿ ವಿರುದ್ಧ ಕಿಡಿಕಾರಿದರು. ಸವಾಲಿನಂತೆ ಮರಳು ತುಂಬಿದರು. ನೂರಾರು ಎತ್ತಿನಗಾಡಿ ಮೂಲಕ ಮರಳು ತುಂಬಿದ ರೇಣುಕಾಚಾರ್ಯ, ಜಿಲ್ಲಾಡಳಿತಕ್ಕೆ ಸವಾಲ್ ಹಾಕಿದರು. ಈ ವೇಳೆ ಮೂಕ ಪ್ರೇಕ್ಷಕರಾದವರು ಪೊಲೀಸ್ ಇಲಾಖೆಯವರು.

ದಾವಣಗೆರೆ ಜಿಲ್ಲಾ ಉಸ್ತುವಾರಿ, ಎಸ್ಪಿ, ಡಿಸಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಜಿಲ್ಲಾ ಮಂತ್ರಿ ಎಸ್. ಆರ್. ಶ್ರೀನಿವಾಸ್, ಡಿಸಿ ಬಗಾದಿ, ಎಸ್ಪಿ ಚೇತನ್ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ಇವರು ದುರಂಕಾರಿಗಳು ಎಂದು ದೂರಿದರು.
ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಿಗಳು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಇವರು ಸುಳ್ಳರು. ಹೊನ್ನಾಳಿ ಜನರಿಗೆ ಸಮರ್ಪಕ ಮರಳು ನೀಡುತ್ತಿಲ್ಲ. ತಾಕತ್ತಿದ್ದರೆ ಸಿಎಂ, ಜಿಲ್ಲಾ ಮಂತ್ರಿ ನನ್ನ ವಿರುದ್ಧ ಕೇಸ್ ಹಾಕಲಿ ಎಂದು ಸವಾಲು ಎಸೆದರು.

ಶಾಮನೂರು ಶಿವಶಂಕರಪ್ಪರ ಮಗ ಗಣೇಶ್ ಮರಳಿನ ಅಭಾವ ಸೃಷ್ಟಿಸುತ್ತಿದ್ದಾರೆ. ಅವರು ಎಂ ಸ್ಯಾಂಡ್ ತಯಾರಿಸುತ್ತಾರೆ. ಅವರಿಗೆ ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ ಎಂದು ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಕಿಡಿಕಾರಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ