ಪುಲ್ವಾಮ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಸ್ಥಿತಿಗೆ ಬಂದಿದೆ ಮೋದಿ ಸರ್ಕಾರ - ವೀರಪ್ಪ ಮೊಯ್ಲಿ

ಭಾನುವಾರ, 24 ಫೆಬ್ರವರಿ 2019 (12:13 IST)
ಚಿಕ್ಕಬಳ್ಳಾಪುರ : ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಸ್ಥಿತಿಗೆ ಈಗಿನ ಮೋದಿ ಸರ್ಕಾರ ಬಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಡಾ. ಎಂ.ವೀರಪ್ಪ ಮೊಯ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ನೋಡಿದರೆ ಮೋದಿಗೆ ಭಯ ಆತಂಕ ಶುರುವಾಗಿದೆ. ವಿಪಕ್ಷಗಳು ಒಗ್ಗಟ್ಟಿನಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ. ಈ ಬಾರಿ ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ. ಇದರಿಂದ ಹತಾಶಗೊಂಡ ಮೋದಿ ಹಾಗೂ ಅಮಿತ್ ಶಾ ಅವರು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.


‘ಜೆಡಿಎಸ್, ಕಾಂಗ್ರೆಸ್ ಹೊಂದಾಣಿಕೆಯಿಂದ ರಾಜ್ಯದಲ್ಲಿ 20ಕ್ಕೂ ಹೆಚ್ಚು ಎಂ.ಪಿ. ಸೀಟುಗಳನ್ನು ಗೆಲ್ಲುತ್ತೇವೆ ಇದರಿಂದ ಅಮಿತ್ ಶಾ ಹತಾಶರಾಗಿದ್ದಾರೆ. ಆದರಿಂದ ರಾಜ್ಯದಲ್ಲಿ 23 ಸೀಟು ಗೆದ್ದರೆ ರಾಜ್ಯ ಸರ್ಕಾರ ಬದಲಾಗುತ್ತೆ ಎಂದು ಹೇಳಿ, ಜನರಿಗೆ ಆಮಿಷ ಒಡ್ಡಿ ಮೋಸ ಮಾಡ್ತಿದ್ದಾರೆ’ ಎಂದು ಬಿಜೆಪಿ ವಿರುದ್ಧ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ