ನೆರೆ ಪರಿಹಾರಕ್ಕೆ ಭಾರೀ ಮೊತ್ತದ ಹಣ ನೀಡಲು ಸಿಎಂ ಎಚ್ ಡಿಕೆ ಪ್ರಧಾನಿ ಮೋದಿಗೆ ಪತ್ರ
ಶನಿವಾರ, 25 ಆಗಸ್ಟ್ 2018 (09:09 IST)
ಬೆಂಗಳೂರು: ಕೊಡಗು ಪ್ರವಾಹ ಪೀಡಿತ ಪ್ರದೇಶಗಳ ಪುನರ್ವಸತಿ ಕೆಲಸಗಳಿಗೆ 2000 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಿಎಂ ಕುಮಾರಸ್ವಾಮಿ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಹಲವು ದಾನಿಗಳು ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದಾರೆ. ಅದರ ಹೊರತಾಗಿಯೂ ಕೊಡಗು ಪ್ರವಾಹ ಪೀಡಿತ ಪ್ರದೇಶವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಸಾವಿರಾರು ಕೋಟಿ ರೂ. ಅಗತ್ಯವಿದೆ. ಹೀಗಾಗಿ ಕೇಂದ್ರಕ್ಕೆ 2000 ಕೋಟಿ ರೂ. ನೀಡುವಂತೆ ಪತ್ರ ಬರೆದಿರುವುದಾಗಿ ಸ್ವತಃ ಸಿಎಂ ಎಚ್ ಡಿಕೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರು ಮತ್ತು ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬೆಳೆ ಹಾನಿ ಪರಿಹಾರ, ರಸ್ತೆ, ಮೂಲಭೂತ ಸೌಕರ್ಯಾಭಿವೃದ್ಧಿ ಸೇರಿದಂತೆ ಪುನರ್ ನಿರ್ಮಾಣ ಕೆಲಸಗಳಿಗೆ ಸುಮಾರು 3000 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.