ಮನಸ್ಥಿತಿ ಬದಲಾವಣೆ ಆಗಬೇಕಿದೆ : ಈಶ್ವರಪ್ಪ
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೆಲವು ಮುಸ್ಲಿಮರು ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳಲು ಆಗುತ್ತದೋ, ಇಲ್ಲವೋ ಎಂಬ ಮನಸ್ಥಿತಿ ಹೊಂದಿದ್ದಾರೆ. ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳಬಾರದು ಅಂತಾ ಕೆಲವರು ನಿಶ್ಚಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯ, ಸಂವಿಧಾನ ಮತ್ತು ಸರ್ಕಾರಕ್ಕೆ ಎಲ್ಲರೂ ಬೆಲೆ ಕೊಡಬೇಕು. ಮುಸ್ಲಿಮರು ಕಾನೂನು ಮೀರಿ ಇರುತ್ತೇವೆ ಅಂತಾ ಹೇಳಿ ಈ ದೇಶದಲ್ಲಿ ಇರಲು ಸಾಧ್ಯವಿಲ್ಲ. ಈ ದೇಶದಲ್ಲಿ ಇರಬೇಕು ಅಂತಾದರೆ ಈ ದೇಶದ ಕಾನೂನಿಗೆ ಸಂವಿಧಾನಕ್ಕೆ ಬೆಲೆ ಕೊಡಬೇಕು.