ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ
ಮೂರು ವರ್ಷದ ಸಂಯುಕ್ತಾ ಎಂಬ ಮಗುವನ್ನು ನೀರಿನ ಟಬ್ನಲ್ಲಿ ಮುಳುಗಿಸಿ, ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಾಯಿ ಗಾಯತ್ರಿ ಎಂಬುವರಿಂದ ಈ ಕೃತ್ಯ ನಡೆದಿದೆ. ನಂತರ ಆಕೆಯ ಪತಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯತ್ರಿ ಖಾಸಗಿ ಆಸ್ಪತ್ರೆಯ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಾಯಿ ಡೆತ್ ನೋಟ್ ಬರೆದಿಟ್ಟುನ ಈ ಕೃತ್ಯ ಎಸಗಿದ್ದಾಳೆ. ಅನಾರೋಗ್ಯ ಮತ್ತು ಖಿನ್ನತೆಯಿಂದ ಬಳಲುತ್ತಿರುವ ತಾಯಿ ಗಾಯತ್ರಿ ಸಾವಿಗೆ ಮುಂದಾಗಿದ್ದಾರೆ. HAL ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.