ಗಂಡನ ಮೇಲಿನ ಸಿಟ್ಟಿಗೆ ಮಗುವನ್ನೇ ಹತ್ಯೆಗೈದ ತಾಯಿ

ಮಂಗಳವಾರ, 10 ಸೆಪ್ಟಂಬರ್ 2019 (10:22 IST)
ಕೊಪ್ಪಳ : ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ತಾಯೊಯೊಬ್ಬಳು ತನ್ನ 16 ತಿಂಗಳ ಮಗುವನ್ನು ಹತ್ಯೆಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗ್ರಾಮ ಸೋಮನಾಳ ಗ್ರಾಮದಲ್ಲಿ ನಡೆದಿದೆ.
ಅಭಿನವ ಮೃತಪಟ್ಟ ಮಗು. ಪ್ರತಿಮಾ (24) ಮಗುವನ್ನೇ ಕೊಂದ ತಾಯಿ. ಪ್ರತಿಮಾ ನಾಲ್ಕು ವರ್ಷದ ಹಿಂದೆ ಶಶಿ ಎಂಬಾತನನ್ನು ಮದುವೆಯಾಗಿದ್ದು, ಇವರಿಗೆ 16 ತಿಂಗಳ ಮಗುವಿತ್ತು. ಪೆಟ್ರೋಲ್ ಬಂಕ್​ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಿ ದುಡಿದ ಹಣವನ್ನು ಮನೆಗೆ ಕೊಡುತ್ತಿರಲಿಲ್ಲ ಎಂಬ ಕಾರಣಕ್ಕೆ  ಕೋಪಗೊಂಡ ಆಕೆ ಉಸಿರುಗಟ್ಟಿಸಿ ಮಗು ಅಭಿನವ್ ನನ್ನು ಕೊಲೆ ಮಾಡಿದ್ದಾಳೆ.
ತಾಯಿ ಪ್ರತಿಮಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ