ಮೈತ್ರಿ ಪಕ್ಷಕ್ಕೆ ಶಾಕ್ ನೀಡಿದ ಸಂಸದ

ಭಾನುವಾರ, 24 ಮಾರ್ಚ್ 2019 (19:21 IST)
ಸ್ವಪಕ್ಷ ಹಾಗೂ ಮಿತ್ರ ಪಕ್ಷದ ವಿರುದ್ದ ಕಾಂಗ್ರೆಸ್ ಹಾಲಿ ಸಂಸದರೊಬ್ಬರು ಬಂಡಾಯ ಸಾರಿರುವುದು ಮೈತ್ರಿ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ತುಮಕೂರಿನ ಸಂಸದರ ನಿವಾಸದಲ್ಲಿ ಬೆಂಬಲಿಗರ ಸಭೆಯನ್ನು ಕರೆದು ಸಂಸದ ಚರ್ಚಿಸಿದ್ದಾರೆ. ತುಮಕೂರು ಕಾಂಗ್ರೆಸ್ ಸಂಸದರಿಂದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.

ಹೆಬ್ಬೂರು ಬಳಿದ ಸಂಸದರ ತೋಟದ ನಿವಾಸದಲ್ಲಿ ಸಭೆ ನಡೆದಿದೆ. ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ನಿರ್ಧಾರಕ್ಕೆ ಮುದ್ದಹನುಮೇಗೌಡ ನಿರ್ಧಾರಕ್ಕೆ ಬರಲು ಸಿದ್ಧತೆ ನಡೆಸಿದ್ದಾರೆ. ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ಕುತೂಹಲ ಕೆರಳಿಸಿದ ಸಂಸದರ ನಡೆಯು ಜೆಡಿಎಸ್ ಗೆ ಬಿಸಿತುಪ್ಪವಾಗಿದೆ. ತುಮಕೂರು ಕ್ಷೇತ್ರ ಜೆಡಿಎಸ್ ಪಕ್ಷದ ಪಾಲಾದ ಹಿನ್ನೆಲೆ ಸಂಸದರಿಂದ ಸಭೆ ನಡೆದಿದ್ದು, ಇಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧೆಗೆ ಮುಂದಾಗಿದ್ದಾರೆ.

ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಹೆಚ್. ಡಿ. ದೇವೇಗೌಡರು ಸ್ಪರ್ಧೆ ಮಾಡುತ್ತಿದ್ದರೆ, ಇತ್ತ ರೆಬಲ್ ಸಂಸದರ ನಡೆ ಚರ್ಚೆಗೆ ಕಾರಣವಾಗುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ