ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ ಎಂದ ಸಂಸದ

ಭಾನುವಾರ, 24 ಮಾರ್ಚ್ 2019 (19:00 IST)
ಕಾಂಗ್ರೆಸ್ ಪಕ್ಷವನ್ನ ಬಳಸಿಕೊಂಡು ಈಗ ಬಿಸಾಕಿರುವುದು ಸರಿಯಲ್ಲ ಅಂತ ಕೈ ಪಡೆ ತೊರೆದ ಹಿರಿಯ ನಾಯಕರ ವಿರುದ್ಧ ಸಂಸದರೊಬ್ಬರು ಗರಂ ಆಗಿ ಹೇಳಿಕೆ ನೀಡಿದ್ದಾರೆ.

ಯಾದಗಿರಿಯ ಕಾಂಗ್ರೆಸ್ ಕಚೇರಿಯಲ್ಲಿ ಸಂಸದ ಬಿ.ವಿ ನಾಯಕ ಹೇಳಿಕೆ ನೀಡಿದ್ದು, ಡಾ. ಎ.ಬಿ ಮಾಲಕರೆಡ್ಡಿ ಕಾಂಗ್ರೆಸ್ ತೊರೆದ ಬಿಜೆಪಿ ಸೇರಿದ ವಿಚಾರವಾಗಿ ಮಾತನಾಡಿದ್ರು. ಕಾಂಗ್ರೆಸ್ ನ ಹಿರಿಯ ನಾಯಕರು ಪಕ್ಷ ತೊರೆದೊರುವುದು ದುರಾದೃಷ್ಟಕರ. 70, 80 ರ ಇಳಿವಯಸ್ಸಿನಲ್ಲಿ ಪಕ್ಷ ಬಿಡುವಂಥದು ತಪ್ಪು ನಿರ್ಧಾರ. ಪಕ್ಷವನ್ನು ಬಳಸಿಕೊಂಡು ಬಿಸಾಕುವುದು ನೋವಿನ ಸಂಗತಿ ಎಂದರು.

ಪಕ್ಷ ಬಿಟ್ಟು ಹೋದವರನ್ನ ಬಿಜೆಪಿ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎನ್ನುವುದು ಅವರ ಸ್ಥಿತಿ ನೋಡಿದ್ರೆ ಗೊತ್ತಾಗುತ್ತದೆ.
ಯಾವುದೋ ಒಂದು ಸಣ್ಣ ಕಾರಣಕ್ಕೆ ಪಕ್ಷ ಬಿಡುವುದು ಸರಿಯಲ್ಲ.  ಹೋಗಿದವರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದೂ ಹೇಳಿದರು.

ಬಿಜೆಪಿ ಪಕ್ಷದಲ್ಲಿ ಯಾವುದೇ ಸಮರ್ಥ ನಾಯಕರಿಲ್ಲ, ಹೀಗಾಗಿ ಒಂದೆರಡು ಬಾರಿ ಶಾಸಕರಾದವರನ್ನು ಲೋಕಸಭೆಗೆ ನಿಲ್ಲಿಸುತ್ತಿದ್ದಾರೆ ಎಂದು ಉಮೇಶ್ ಜಾಧವ ಬಗ್ಗೆ ಪರೋಕ್ಷ ಟೀಕೆ ಮಾಡಿದ್ರು.

ಬಿಜೆಪಿ ಪಕ್ಷದಲ್ಲಿ ಲೋಕಸಭೆ ನಿಲ್ಲಲು ಅಭ್ಯರ್ಥಿಗಳು ಇಲ್ಲ ಹೀಗಾಗಿ, ಕಾಂಗ್ರೆಸ್ ನಾಯಕರನ್ನು ಸೆಳೆಯಲಾಗುತ್ತಿದೆ. ಡಾ.‌ ಎ.ಬಿ ಮಾಲಕರೆಡ್ಡಿ ಪಕ್ಷ ಬಿಟ್ಟಿರುವುದರಿಂದ ಯಾವುದೇ ತೊಂದರೆ ಇಲ್ಲ, ವೈಯಕ್ತಿಕ ಸಮಸ್ಯೆ ಆಗಬಹುದು ಅಂತ ಯಾದಗಿರಿಯಲ್ಲಿ ರಾಯಚೂರು ಲೋಕಸಭೆ ಸಂಸದ ಹಾಗೂ ಅಭ್ಯರ್ಥಿ ಬಿ.ವಿ. ನಾಯಕ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ