ವರ್ಕೌಟ್ ಆಗುತ್ತಾ ಪೊಲೀಸರ ಹೊಸ ಪ್ಲ್ಯಾನ್?
ಇತ್ತೀಚೆಗೆ ಕಳ್ಳರು ಫುಲ್ ಸ್ಮಾರ್ಟ್ ಆಗುತ್ತಿದ್ದಾರೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದ್ರೆ , ಕಳ್ಳರು ರಂಗೋಲಿ ಕೆಳಗೆ ನುಗ್ಗುತ್ತಿದ್ದಾರೆ. ಹೀಗಾಗಿ ಪೊಲೀಸರಿಗೆ ಅತ್ಯಾಧುನಿಕ ತಂತ್ರಜ್ಞಾನದ ಅರಿವು ಮೂಡಿಸುವ ಅಗತ್ಯವಿದೆ. ಹೀಗಾಗಿ ಭದ್ರತಾ ಸಿಬ್ಬಂದಿಗಳು ಅಪರಾಧಿಗಳಿಗಿಂತಲೂ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಮಟ್ಟಿಗೆ ಅವರನ್ನು ಸಿದ್ಧಗೊಳಿಸುವ ಅಗತ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಪೊಲೀಸ್ ಮತ್ತು ಭದ್ರತಾ ಎಕ್ಸ್ಪೋ ನಡೆಸಲಾಗುತ್ತಿದೆ. ಈ expo ಪೊಲೀಸ್ ವಿಭಾಗಕ್ಕೆ ಉತ್ತಮ ವೇದಿಕೆಯಾಗಲಿದೆ ಎಂದು ಸಂಚಾರ ವಿಭಾಗದ ಆಯುಕ್ತರಾದ ಡಾಕ್ಟರ್ ರವಿಕಾಂತೇಗೌಡ ಅವರು ತಿಳಿಸಿದ್ರು. ಇದಕ್ಕೆ ಸಂಬಂಧಿಸಿದ ಲೋಗೋವನ್ನು ಟ್ರಾಫಿಕ್ ಜಂಟಿ ಕಮಿಷನರ್ ಡಾ.ಬಿ.ಆರ್. ರವಿಕಾಂತೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಲೋಗೋವನ್ನು ಅನಾವರಣಗೊಳಿಸಿದರು. ಈ ಭದ್ರತಾ expo ಆಕ್ಟೊಬರ್ 14 ರಿಂದ 16 ರವರೆಗೆ ನಡೆಯಲಿದೆ. ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದೆ ಯೋಚಿಸುವ ಹಲವು ತಂತ್ರಾಂಶಗಳು ಇಲ್ಲಿ ಲಭ್ಯವಾಗಲಿವೆ.