ನಗರದಲ್ಲಿ ಮಳೆ:
ನಿನ್ನೆ ರಾತ್ರಿ 8.45ಕ್ಕೆ ಅರಂಭವಾದ ಮಳೆ ಅರ್ಧ ಗಂಟೆ ಕಾಲ ಜೋರಾಗಿ ಸುರಿಯಿತು. ತಡ ರಾತ್ರಿವರೆಗೂ ಜಿಟಿ ಜಿಟಿ ಮಳೆಯಾಗಿದೆ. ಗುಡುಗು ಮಿಂಚಿನ ಮಳೆಗೆ ಹಲವು ರಸ್ತೆಗಳು ಹೊಳೆಯಾಗಿ ಮಾರ್ಪಟ್ಟಿದ್ದವು. ರಸ್ತೆಗಳ ಮೇಲೆ 2-3 ಅಡಿ ನೀರು ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರಮುಖ ರಸ್ತೆಗಳಲ್ಲಿರುವ ಮರದ ಕೊಂಬೆಗಳು ಮುರಿದುಬಿದ್ದವು. ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದರಿಂದ ನಗರದ ಹಲವು ಬಡಾವಣೆಗಳಲ್ಲಿನ ನಿವಾಸಿಗಳು ಪರದಾಡಿದರು. ಮ್ಯಾನ್‌ಹೋಲ್‌ಗಳು ಉಕ್ಕಿಹರಿದ ಪರಿಣಾಮ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿರುವುದು ಅಲ್ಲಲ್ಲಿ ಕಂಡುಬಂದಿದೆ.
ನಗರದ ಹಲವು ಬಡಾವಣೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ:
ಚಾಮರಾಜಪೇಟೆ, ಜಯನಗರ, ಜೆ.ಪಿ.ನಗರ, ಮೈಸೂರು ರಸ್ತೆ, ವಿಶ್ವೇಶ್ವರ ಪುರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ವಿಜಯನಗರ, ನಾಗರಭಾವಿ, ಹೆಬ್ಬಾಳ, ಬಸವೇಶ್ವರನಗರ, ರಾಜಾಜಿನಗರ, ಕೆಂಗೇರಿ, ಕೋರಮಂಗಲ ಸೇರಿ ನಗರದ ಹಲವು ಬಡಾವಣೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ.