ರಾತ್ರಿ ಆ ಕೆಲಸ ಬೇಕು ಎಂದರೆ ಇಲ್ಲಿ ನಿದ್ದೆಗೆಡಲೇಬೇಕು!

ಬುಧವಾರ, 22 ಮೇ 2019 (13:46 IST)
ಇಲ್ಲಿ ನಿತ್ಯ ನಿದ್ದೆಗೆಟ್ಟರೆ ಮಾತ್ರ ರಾತ್ರಿ ಆ ಕೆಲಸ ಆಗುತ್ತದೆ. ಇಲ್ಲದಿದ್ದರೆ ಇಲ್ಲ.

ರಾತ್ರಿ ಜಾಗರಣೆ ಮಾಡಿದರೆ ಮಾತ್ರ ಇಲ್ಲಿನ ಜನರಿಗೆ ಅದು ಸಿಗುತ್ತದೆ. ಇಲ್ಲದಿದ್ದರೆ ಒಂಚೂರು ಸಿಗುವುದೇ ಇಲ್ಲ. ಅದು ಸಿಗದಿದ್ದರೆ ಮನುಷ್ಯರ ಪರಿಸ್ಥಿತಿ ಕೇಳೋದೇ ಬೇಡ.

ಅಷ್ಟಕ್ಕೂ ಇಲ್ಲಿ ನಿತ್ಯ ನೀರಿಗಾಗಿ ನಿದ್ದೆಗೆಡಬೇಕು. ನೀರಿದ್ದರೂ ಪ್ರತಿರಾತ್ರಿ ನೀರಿಗಾಗಿ ನಿದ್ದೆಗೆಡುವ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮಸ್ಥರ ಗೋಳು ಇದಾಗಿದೆ. ರಾತ್ರಿ ಜಾಗರಣೆ ಮಾಡಿದ್ರೆ ಮಾತ್ರ ಸಿಗುತ್ತೆ ಈ ಗ್ರಾಮದ ಜನರಿಗೆ. ಗ್ರಾಮದಲ್ಲಿ ವಿಫುಲವಾಗಿ ನೀರಿದ್ದರೂ ಪೂರೈಕೆ ಮಾಡುವಲ್ಲಿ ಗ್ರಾಮ ಪಂಚಾಯತಿ ನಿರ್ಲಕ್ಷ್ಯ ವಹಿಸಿದೆ. ನೀರಿನ ಆಕರಗಳಾಗಿ ಬೊರವೆಲ್‌ಗಳಿದ್ದರೂ ಸರಿಯಾಗಿ ಗ್ರಾಮಕ್ಕೆ  ಸರಬರಾಜು ಮಾಡದ ಗ್ರಾಮ ಪಂಚಾಯತಿ ಕ್ರಮಕ್ಕೆ ಜನರು ಬೇಸತ್ತಿದ್ದಾರೆ.

ಕೊಡಚವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅವರೊಳ್ಳಿ ಗ್ರಾಮದಲ್ಲಿ ಗ್ರಾಪಂ ನಿರ್ಲಕ್ಷ್ಯಕ್ಕೆ ನಿತ್ಯ ನಿದ್ದೆಗೆಡುತ್ತಿದ್ದಾರೆ ಗ್ರಾಮಸ್ಥರು.

ವಾಟರ್ ಮ್ಯಾನ್ ಇದ್ದರೂ ನೀರಿನ‌ ನಿರ್ವಹಣೆ ಆಗುತ್ತಿಲ್ಲ. ಗ್ರಾಪಂ ನಿರ್ವಹಣೆ ಇಲ್ಲದ್ದಕ್ಕೆ ಗ್ರಾಮಸ್ಥರಿಗೆ ತಪ್ಪಿಲ್ಲ ಗೋಳು ಎನ್ನಲಾಗಿದೆ. ರಾತ್ರಿಯೂ ಕೂಡಾ ಸರತಿ ಸಾಲಿನಲ್ಲಿ ನೀರು ತುಂಬಿಕೊಳ್ಳುತ್ತಿದ್ದಾರೆ ಗ್ರಾಮಸ್ಥರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ