ಬೆಂಗಳೂರು: ಮೊದಲ ರಾತ್ರಿ ಮಧುರ ರಾತ್ರಿಯಾಗಿರಬೇಕೆಂದು ಎಲ್ಲಾ ನವವಿವಾಹಿತರೂ ಬಯಸುತ್ತಾರೆ. ಆದರೆ ಮೊದಲ ರಾತ್ರಿ ಸಂಗಾತಿಗೆ ಇಷ್ಟವಾಗುವ ಹಾಗೆ ಹೇಗೆ ನಡೆದುಕೊಳ್ಳುವುದು ಎಂಬ ಆತಂಕ ಇದ್ದೇ ಇರುತ್ತದೆ.
ಎಲ್ಲಿಂದ ಮಾತು ಶುರು ಮಾಡೋದು?
ಮೊದಲು ಮಾತನಾಡಿದರೆ ಚೆನ್ನ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಮಾತು ಶುರು ಮಾಡುವುದು ಹೇಗೆ? ನಾನು ಈ ರೀತಿ ಮಾತನಾಡಿದರೆ ಆಕೆ/ಆತನಿಗೆ ಇಷ್ಟವಾಗದೇ ಹೋದರೆ ಎಂಬತಹ ಸಹಜ ಆತಂಕಗಳು.
ನಾನು ಹೇಗಿದ್ದರೆ ಚೆನ್ನ?
ನಾನು ಹೇಗಿದ್ದರೆ ಸಂಗಾತಿಗೆ ಇಷ್ಟವಾಗಬಹುದು? ನಾನು ಹೀಗೆ ನಡೆದುಕೊಳ್ಳುವುದರಿಂದ ಸಂಗಾತಿಗೆ ಬೇಸರವಾಗಬಹುದೇ ಇತ್ಯಾದಿ ಆತಂಕಗಳು ಇದ್ದೇ ಇರುತ್ತದೆ. ಅದಕ್ಕಾಗಿ ಸಂವಹನ ನಡೆಸುವುದು ಮುಖ್ಯ.
ರೊಮ್ಯಾನ್ಸ್ ಕೈಕೊಟ್ಟರೆ?
ರೊಮ್ಯಾನ್ಸ್ ಮಾಡುವಾಗ ಸುರಕ್ಷಾ ಕ್ರಮ ಕೈಕೊಟ್ಟರೆ? ಕ್ಲೈಮ್ಯಾಕ್ಸ್ ನಲ್ಲಿ ಸಂಗಾತಿಗೆ ನೋವಾದರೆ ಎಂಬ ಅನುಮಾನ ಆತಂಕಗಳು ಇದ್ದೇ ಇರುತ್ತದೆ. ಜತೆಗೆ ಲೈಂಗಿಕತೆ ಬಗ್ಗೆ ಇರುವ ಅಜ್ಙಾನ ಇಬ್ಬರಲ್ಲೂ ಇರಿಸುಮುರಿಸು ಉಂಟುಮಾಡಬಹುದು.
ಕೆಲವೊಂದು ಅಭ್ಯಾಸಗಳು
ಗೊರಕೆ ಹೊಡೆಯುವುದು, ರಾತ್ರಿ ಮಧ್ಯೆ ಮಧ್ಯೆ ಏಳುವುದು, ಇತ್ಯಾದಿ ಅಭ್ಯಾಸಗಳು ಸಂಗಾತಿಗೆ ಕಿರಿ ಕಿರಿ ಎನಿಸಬಹುದು.
ಇದಕ್ಕೆಲ್ಲಾ ಒಂದೇ ಪರಿಹಾರ ಎಂದರೆ ಮದುವೆಗೆ ಮುನ್ನ ಇಂತಹ ಆತಂಕಗಳನ್ನು ಮುಕ್ತವಾಗಿ ಕುಳಿತು ಚರ್ಚಿಸಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವುದೇ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ