ಇನ್ನು ಆರು ತಿಂಗಳಗಳ ಕಾಲ ಓಲಾ ಟ್ಯಾಕ್ಸಿ ಸೇವೆ ಸ್ಥಗಿತ. ಕಾರಣವೇನು ಗೊತ್ತಾ?

ಶನಿವಾರ, 23 ಮಾರ್ಚ್ 2019 (11:13 IST)
ಬೆಂಗಳೂರು : ಸಾರಿಗೆ ಇಲಾಖೆಗಳು ನೀಡಿದ ಪರವಾನಿಗೆಯನ್ನು ದುರ್ಬಳಕೆ ಮಾಡಿದ್ದರಿಂದ ಓಲಾ ಟ್ಯಾಕ್ಸಿ ಸೇವೆಗೆ  ರಾಜ್ಯಾದ್ಯಂತ 6 ತಿಂಗಳ ಕಾಲ ಸಾರಿಗೆ ಇಲಾಖೆ ನಿಷೇಧ ಹೇರಿದೆ.


ಬಿಬಿಎಂಪಿ ವ್ಯಾಪ್ತಿಯಲ್ಲಿ ಓಲಾ ಟ್ಯಾಕ್ಸಿ ಓಡಿಸಲು ಅನಿ ಟೆಕ್ನಾಲಜಿಸ್ ಸಂಸ್ಥೆ ಹೆಸರಿನಲ್ಲಿ ಓಲಾಗೆ 2021ರವರೆಗೆ ಪರವಾನಗಿ ನೀಡಲಾಗಿತ್ತು. ಆದರೆ ಓಲಾ ಕೇವಲ ಟ್ಯಾಕ್ಸಿಗಳನ್ನು ಮಾತ್ರವಲ್ಲದೆ ಬೈಕ್ ಟ್ಯಾಕ್ಸಿಗಳನ್ನೂ ಪ್ರಾರಂಭಿಸಿ ನಿಯಮವನ್ನು ಉಲ್ಲಂಘಿಸಿದೆ. ಆದಕಾರಣ ಓಲಾ ಕ್ಯಾಬ್ ಸಂಸ್ಥೆಗೆ  ನೀಡಿದ್ದ ಪರವಾನಿಗೆಯನ್ನು 6 ತಿಂಗಳ ಕಾಲ ರದ್ದುಗೊಳಿಸಿ ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ಅವರು ಆದೇಶ ಹೊರಡಿಸಿದ್ದಾರೆ.


ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ಮಾರ್ಚ್ 18ರಂದು ಈ ಆದೇಶವನ್ನು  ಹೊರಡಿಸಿದ್ದು, ಅಲ್ಲದೆ ಈ ಆದೇಶ ಹೊರಡಿಸಿದ ಮೂರು ದಿನಗಳಲ್ಲಿ ಓಲಾ ಪರವಾನಗಿಯನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಬೇಕು ಎಂದೂ ತಿಳಿಸಲಾಗಿದೆ. ಆದ್ದರಿಂದ  ಓಲಾ ಟ್ಯಾಕ್ಸಿ ಸೇವೆ ರಾಜ್ಯಾದ್ಯಂತ ಅನಿರ್ದಿಷ್ಟವಾಗಿ ಸ್ಥಗಿತಗೊಳ್ಳಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ