ಗುಜರಾತ್ ನಲ್ಲಿ ಬಿಜೆಪಿ ಸೋಲಿಸಲು ಪಾಕ್ ಜತೆ ಕಾಂಗ್ರೆಸ್ ನಾಯಕರು ಕೈ ಜೋಡಿಸಿದ್ದಾರಂತೆ!

ಸೋಮವಾರ, 11 ಡಿಸೆಂಬರ್ 2017 (08:57 IST)
ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲು ಹೊರಟಿರುವ ಕಾಂಗ್ರೆಸ್ ಪಾಕ್ ಅಧಿಕಾರಿಗಳ ಜತೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
 

ಪ್ರಧಾನಿ ಮೋದಿಯನ್ನು ನೀಚ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸುವ ಮೊದಲೇ ಅವರ ಮನೆಯಲ್ಲಿ ಈ ರಹಸ್ಯ ಸಭೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿಯೊಬ್ಬರು ಭಾಗವಹಿಸಿದ್ದರು ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ಇದೇ ಆರೋಪ ಮಾಡಿದ್ದು, ವಿದೇಶಾಂಗ ಇಲಾಖೆಗೆ ಮಾಹಿತಿ ನೀಡದೇ ಪಾಕ್ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಕಾಂಗ್ರೆಸ್ ನಾಯಕರು ರಹಸ್ಯ ಸಭೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

ಈ ಸಭೆ ನಡೆದ ಮಾರನೇ ದಿನವೇ ಅಯ್ಯರ್ ನನ್ನನ್ನು ನೀಚ ಎಂದು ಕರೆದರು. ನಮ್ಮ ದೇಶದ ಚುನಾವಣೆಯಲ್ಲಿ ಪಾಕ್ ಮೂಗು ತೂರಿಸುತ್ತದೆಂದರೆ ಅದರ ಅರ್ಥವೇನು? ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪ್ರಧಾನಿ ಮೋದಿಗೆ ಅನುಮಾನಗಳಿದ್ದರೆ ನೇರವಾಗಿ ಮನಮೋಹನ್ ಸಿಂಗ್ ಅಥವಾ ಹಮೀದ್ ಅನ್ಸಾರಿ ಅವರನ್ನೇ ಕೇಳಲಿ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ