ಅಪಾರ್ಟ್ಮೆಂಟ್ ಗಳಲ್ಲಿ ಶೂ ಕಳ್ಳನ ಹಾವಳಿ
ದುಬಾರಿ ಬೆಲೆಯ ಶೂ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಹೆಣ್ಣೂರು ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.ಅಪಾರ್ಟ್ಮೆಂಟ್ ನ ಪ್ರತಿ ಪ್ಲಾಟ್ ಗೆ ಹೋಗಿ ಅನಾಯಸವಾಗಿ ಶೂ ಕಳ್ಳರು ಕದಿಯುತ್ತಿದ್ರು.ನಂತರ ಗೋಣಿಚೀಲದಲ್ಲಿ ಶೂಗಳನ್ನ ತುಂಬಿ ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಹೊರಮಾವು ಬಳಿ ಇರುವ ವಜ್ರ ಹಾಗೂ ನಭಾ ವೈಭವ್ ಅಪಾರ್ಟ್ಮೆಂಟ್ ನಲ್ಲಿ ಈ ಒಂದು ಕೃತ್ಯ ನಡೆದಿದೆ.ಶೂಗಳನ್ನ ಕದ್ದು ಸೆಕ್ಯೂರಿಟಿ ಗಾರ್ಡ್ ನ ಚೇರ್ ಬಳಸಿ ಗೋಡೆ ಹಾರಿ ಎಸ್ಕೇಪ್ ಆಗ್ತಿದ್ದು,ಈ ಸಂಬಂಧ ಆನ್ ಲೈನ್ ನಲ್ಲಿ ನಿವಾಸಿಗಳು ದೂರು ಸಲ್ಲಿಸಿದ್ದಾರೆ.