ಪೊಲೀಸರಿಗೆ ಸಿಕ್ಕಿದ್ದು ಒಂದು ಕ್ಲೂ..ಸೆರೆ ಸಿಕ್ಕ ಆರೋಪಿಗಳು 28

ಶನಿವಾರ, 25 ಫೆಬ್ರವರಿ 2023 (18:51 IST)
ಪೊಲೀಸರಿಗೆ ಸಿಕ್ಕಿದ್ದು ಅದೊಂದೇ ಕ್ಲೂ.ಆದ್ರೆ ಸಿಕ್ಕಿಬಿದ್ದ ಆರೋಪಿಗಳು ಮಾತ್ರ 28 ಜನ.ಸಿಲಿಕಾನ್ ಸಿಟಿ ಯುವಕರನ್ನ ನಶೆಯಲ್ಲಿ ತೇಲಿಸ್ತಿದ್ದವರು ಖಾಕಿ ಬಲೆಗೆ ಬಿದ್ರೆ‌.ಧಮ್ ಎಳೆದು ತೇಲಾಡ್ತಿದ್ದವರು ಕೂಡ ಅಂದರ್ ಆಗಿದ್ದಾರೆ.ನೋಡೋಕೆ ಸಣ್ಣ ಸಣ್ಣ ಪೊಟ್ಟಣ ರೀತಿ ಕಾಣ್ತಿದೆ.ಆದ್ರೆ ಇದರ ಬೆಲೆ ಕೇಳಿದ್ರೆ ನೀವೆ ಶಾಕ್ ಆಗ್ತಿರ.ಯಾಕಂದ್ರೆ ಅದೆಲ್ಲವೂ ಲಕ್ಷ ಲಕ್ಷ ಮೌಲ್ಯದ ಮಾದಕ ವಸ್ತುಗಳು‌.ಹೀಗೆ ಸಿಲಿಕಾನ್ ಸಿಟಿಯ ಯುವ ಸಮೂಹವನ್ನು ದಾರಿ ತಪ್ಪಿಸಲು ಬಂದಿದ್ದ ಡ್ರಗ್ಸ್ ಅನ್ನ ಪೊಲೀಸರು ಸೀಜ್ ಮಾಡಿದ್ದಾರೆ.

ಜನವರಿ 25.ಅಮೃತಹಳ್ಳಿ ಇನ್ಸ್ ಪೆಕ್ಟರ್ ಗುರುಪ್ರಸಾದ್ ಗೆ ಇಬ್ಬರು ಆರೋಪಿಗಳು ಡ್ರಗ್ಸ್ ಮಾರಾಟ ಮಾಡ್ತಿದ್ದಾರೆಂಬ ಮಾಹಿತಿ ಸಿಕ್ಕಿತ್ತು.ಇದೇ ಮಾಹಿತಿ ಬೆನ್ನತ್ತಿದ್ದ ಪೊಲೀಸರು.ಅಮೃತಹಳ್ಳಿಯ ಜಕ್ಕೂರು ಸಮೀಪ ಮಾದಕ ವಸ್ತು ಮಾರಾಟ ಮಾಡ್ತಿದ್ದ ಮಬಿನ್ ಮತ್ತು ಮನ್ಸೂರ್ ಎಂಬ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.ಶತಾತ ಗತಾಯ ಈ ಡ್ರಗ್ಸ್ ಜಾಲವನ್ನ ಬೇಧಿಸಲೇಬೇಕು ಅಂತಾ ಪಣ ತೊಟ್ಟಿದ್ದಾರೆ‌‌.ಸುಧೀರ್ಘ ವಿಚಾರಣೆ ನಡೆಸಿದ ಖಾಕಿ ತಂಡ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಗಳಾದ ಮಬಿನ್ , ಮನ್ಸೂರ್, ಅಭಿಷೇಕ್, ಅಕ್ಷಯ್ ಶಿವನ್ , ಅರ್ಜುನ್,ಅಖಿಲ್ , ಜೋಯಲ್ ,ಪೃಥ್ವಿನ್ ಸೇರಿದಂತೆ ಎಂಟು ಜನರನ್ನ ಬಂಧಿಸಲಾಗಿದೆ‌.ಅಷ್ಟೇ ಅಲ್ಲದೇ ಇವರಿಂದ ಡ್ರಗ್ಸ್ ಪಡೆದು ಮತ್ತಲ್ಲಿ ತೇಲಾಡ್ತಿದ್ದ 20 ಜನ ಮಾದಕ ವ್ಯಸನಿಗಳನ್ನು ಬಂಧಿಸಲಾಗಿದೆ.ಇದ್ರಲ್ಲಿ ಬೆಂಗಳೂರು ಮತ್ತು ಕೇರಳ ಮೂಲದವರಿದ್ದಾರೆ.

8 ಜನ ಪೆಡ್ಲರ್ ಗಳು.ಕೇರಳದಿಂದ ಮಾದಕ ವಸ್ತುವನ್ನು ಬಸ್,ಟ್ರೈನ್ ಮೂಲಕ ತರಿಸಿಕೊಳ್ತಿದ್ರು‌.ಬೆಂಗಳೂರಲ್ಲಿನ ಕಾಲೇಜು ವಿದ್ಯಾರ್ಥಿಗಳು,ಟೆಕ್ಕಿಗಳನ್ನ ಟಾರ್ಗೆಟ್ ಮಾಡಿ ಅದನ್ನು ಮಾರಾಟ ಮಾಡ್ತಿದ್ರು.ಸದ್ಯ ಪ್ರಕರಣ ಸಂಬಂಧ ಅಮೃತಹಳ್ಳಿ ಠಾಣೆ ಪೊಲೀಸರಿಂದ ಒಟ್ಟು 28 ಜನರನ್ನ ಬಂಧಿಸಲಾಗಿದ್ದು.ಬಂಧಿತರಿಂದ 50 ಲಕ್ಷ ಮೌಲ್ಯದ 740 ಗ್ರಾಂ ಮೆಥಕ್ಯೂಲನ್,200 ಗ್ರಾಂ ಗಾಂಜಾ,150 ಗ್ರಾಂ ಚರಸ್,20 ಗ್ರಾಂ ಎಂಡಿಎಂಎ,ಒಂದು ಬೈಕ್ ಹಾಗೂ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಸದ್ಯ ತನಿಖೆ ಮುಂದುವರೆಸಿರುವ ಅಮೃತಹಳ್ಳಿ ಪೊಲೀಸರು ಮತ್ತಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ‌.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ