ಕಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸರು

ಮಂಗಳವಾರ, 13 ಡಿಸೆಂಬರ್ 2022 (21:07 IST)
ಮನೆಯಲ್ಲಿ ಕಳ್ಳತನ ಮಾಡೋಕೆ ಬಂದ ಕಳ್ಳನ ಮೇಲೆ ಮಾಲೀಕ ಗುಂಡು ಹಾರಿಸಿದ್ದಾನೆ.ಬೆಳಗಿನ ಜಾವ ಎರಡುವರೆ ಸುಮಾರಿಗೆ ಕಳ್ಳ ಮನೆಗೆ ಎಂಟ್ರಿಯಾಗಿದ್ದಾನೆ‌. ಕಾಂಪೌಂಡ್ ಹಾರುತ್ತಿದ್ದಂತೆ ನಾಯಿಗಳು ಜೋರಾಗಿ ಬೋಗಳೋಕೆ ಶುರು ಮಾಡಿದ್ವು.ಈ ವೇಳೆ ತನ್ನ ಬಳಿಯಿದ್ದ ಲೈಸೆನ್ಸ್ ಡಬ್ಬಲ್ ಬ್ಯಾರಲ್ ಗನ್‌ ತೆಗೆದುಕೊಂಡು ಹೊರ ಬಂದಿದ್ದ ಮಾಲೀಕ. ವೆಂಕಟೇಶ್ ಕಳ್ಳನ ಬಲಗಾಲಿಗೆ ಗುಂಡು ಹಾರಿಸಿದ್ದಾನೆ.ಮನೆಯಲ್ಲಿ ವೆಂಕಟೇಶ್ ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಿದ್ರು. ರೈಲು ಹಳಿ ಪಕ್ಕದಲ್ಲೇ ಮನೆ ಇದೆ, ಒಂಟಿ ಮನೆ ತರ ಕಾಣುತ್ತಿತ್ತು. ಜನ ಯಾರು ಇರಲ್ಲ ಅಂತ ಕಳ್ಳ ಹೋಗಿದ್ದಾನೆ.ಒಂಟಿ ಮನೆ ಅಂತ ವೆಂಕಟೇಶ್ ಲೈಸೆನ್ಸ್ ಪಡೆದು ಡಬಲ್ ಬ್ಯಾರಲ್ ಗನ್ ಇಟ್ಟಿದ್ರು. ಇನ್ನೂ ಗುಂಡೆಟು ತಿಂದ ಲಕ್ಷ್ಮಣ್ ನನ್ನ ಬೌರಿಂಗ್ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ