ಬೋರ್ಡ್ ಎಕ್ಸಾಮ್ ರದ್ದುಗೊಳಿಸಲು ಸಿಎಂ ಶ್ರೀ ಬಸವರಾಜ ಬೊಮ್ಮಾಯಿಗೆ ಪತ್ರ
2023ರಿಂದಲೇ ರಾಜ್ಯ ಸರ್ಕಾರವು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದೆ. ಮಾತ್ರವಲ್ಲ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ. ಮುಂದಿನ ವರ್ಷದ ಮಾರ್ಚ್ ನಿಂದ ಪಠ್ಯಪುಸ್ತಕ ಆಧರಿಸಿ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಇದಕ್ಕೆ ರಾಜ್ಯ ಸರಕಾರ ಒಪ್ಪಿಗೆ ಕೂಡ ಸೂಚಿಸಿದೆ. ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಂತಕ್ಕೆ ತಲುಪುವ ಮುನ್ನ ಅವರ ಕಲಿಕಾ ಮಟ್ಟಮೌಲ್ಯಮಾಪನ ಮಾಡುವ ದೃಷ್ಟಿಯಿಂದ 5 ಮತ್ತು 8ನೇ ತರಗತಿ ಹಂತದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಪ್ರಸ್ತುತ ಜಗತ್ತು ಪರೀಕ್ಷೆಗಳಿಂದ ದೂರ ಉಳಿದು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ಕೊಡುತ್ತಿರುವ ಇಂತಹ ಸಂದರ್ಭದಲ್ಲಿ "ಪರೀಕ್ಷಾ ಪದ್ಧತಿ" ಎಂಬ ಪುರಾತನ ಪದ್ಧತಿಗೆ ಮರಳುತ್ತಿರುವ ಉದ್ದೇಶವೇನು? ಇದು ಹಾಸ್ಯಾಸ್ಪದ ಹಾಗೂ ಅವೈಜ್ಞಾನಿಕ. ಆದ್ದರಿಂದ ಕೂಡಲೇ 5 ಮತ್ತು 8ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ನಿಲ್ಲಿಸಲು ಶಿಕ್ಷಣ ಸಚಿವರಿಗೆ ಸೂಚಿಸಬೇಕೆಂದು ಸಿಎಂ ಶ್ರೀ ಬಸವರಾಜ ಬೊಮ್ಮಾಯಿ ಯವರಿಗೆ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ.