ದ್ವೇಷ ರಾಜಕಾರಣ ಮೇಲ್ನೋಟಕ್ಕೆ ಕಾಣಿಸ್ತಿದೆ

ಮಂಗಳವಾರ, 23 ಮೇ 2023 (20:40 IST)
ಬಿಜೆಪಿ ಅವಧಿಯ ಪ್ರಕರಣಗಳ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಶಿಕಾರಿಪುರದ ಶಾಸಕ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಶ್ಚರ್ಯ ತರುವಂಥದ್ದೇನೂ ಇಲ್ಲ, ಇದೆಲ್ಲ ನಿರೀಕ್ಷಿತವೇ. ಇದು ದ್ವೇಷದ ರಾಜಕಾರಣ ಅಂತ ಮೇಲ್ನೋಟಕ್ಕೇ ಕಾಣಿಸ್ತಿದೆ. ಹಿಂದೆಯೂ ಹಿಂದೂ ಕಾರ್ಯಕರ್ತರ ಹತ್ಯೆ ಆಯ್ತು, ವಿಪಕ್ಷ ಕಾರ್ಯಕರ್ತರ ಮೇಲೆ ಹಲ್ಲೆ ಆಗಿರೋದನ್ನು ಮರೆತಿಲ್ಲ. ಪ್ರಗತಿಯಲ್ಲಿರುವ ಕಾಮಗಾರಿಗಳಿಗೂ ಅನುದಾನ ತಡೆ ಹಿಡಿಯಬಹುದು. ಆಡಳಿತ ಪಕ್ಷ ಎಲ್ಲರನ್ನು ಸಮಾನವಾಗಿ ನಡೆಸ್ಕೋಬೇಕು. ಆದರೆ ಇವರು ನಿರೀಕ್ಷೆಯಂತೆ ನಡೆದುಕೊಳ್ತಿದ್ದಾರೆ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ