ಡಿಸಿಎಂ ಸ್ಥಾನಕ್ಕಾದ್ರೂ ಒತ್ತಡ ಹಾಕಬಹುದಿತ್ತು

ಮಂಗಳವಾರ, 23 ಮೇ 2023 (20:16 IST)
ಕಾಂಗ್ರೆಸ್​​​ನಲ್ಲಿ ಲಿಂಗಾಯತರಿಗೆ ಉನ್ನತ ಸ್ಥಾನ ಕೊಡದ ವಿಚಾರಕ್ಕೆ ಸಂಬಂಧಿಸಿದಂತೆ ಶಿಕಾರಿಪುರದ ಶಾಸಕ
ಬಿ. ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅತೀ ಹೆಚ್ವು ಲಿಂಗಾಯತ ಸಮುದಾಯದ ಶಾಸಕರು ಕಾಂಗ್ರೆಸ್‌ನಲ್ಲಿ ಗೆದ್ದಿದ್ದಾರೆ. ಇಂಥ ಸಂದರ್ಭದಲ್ಲಿ ಸಿಎಂ‌ ಸ್ಥಾನಕ್ಕೆ‌ ಒತ್ತಡ ಹಾಕೋದು ಬೇಡ, ಕನಿಷ್ಟ ಡಿಸಿಎಂ ಸ್ಥಾನಕ್ಕಾದರೂ ಒತ್ತಡ ಹಾಕಬಹುದಿತ್ತು. ಇದನ್ನು ನಾನು ಹೇಳ್ತಿಲ್ಲ, ರಾಜ್ಯದ ಜನ ಹೇಳ್ತಿದಾರೆ ಎಂದು ಬಿ. ವೈ.ವಿಜಯೇಂದ್ರ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ