ಶೀಘ್ರದಲ್ಲೇ ಹೊಟೇಲ್‌ನಲ್ಲಿ ಟೀ-ಕಾಫಿ ಬೆಲೆ ಹೆಚ್ಚಳ ಸಾಧ್ಯತೆ

ಭಾನುವಾರ, 23 ಜುಲೈ 2023 (16:31 IST)
ಸರ್ಕಾರದಿಂದ 3ರೂ ಹಾಲಿನ ದರ ಏರಿಕೆ ಹಿನ್ನೆಲೆ ಶೀಘ್ರದಲ್ಲೇ ಹೊಟೇಲ್‌ನಲ್ಲಿ ಟೀ-ಕಾಫಿ ಬೆಲೆ ಹೆಚ್ಚಳ ಸಾಧ್ಯತೆ ಇದೆ ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.ಆಗಸ್ಟ್ 1ರಿಂದ ಹಾಲಿನ ದರ 3 ರೂ ಏರಿಕೆಯಾಗಲಿದೆ.ಕಾಫಿ ಪೌಡರ್‌ನ ಬೆಲೆಯು ಹೆಚ್ಚಾಗಿದ್ದು ಕೆ.ಜಿಗೆ 8೦ರೂ ಇದೆ.ಹೀಗಾಗಿ ಗ್ರಾಹಕರಿಗೆ ಹೊರೆಯಾಗದಂತೆ ಕಾಫಿ-ಟೀ ಬೆಲೆ ಏರಿಕೆ ಸಾಧ್ಯತೆ ಇದೆ.ಜುಲೈ 25ರಂದು ಹೋಟೆಲ್ ಮಾಲೀಕರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ