ನಗರದಲ್ಲಿ ಹೆಚ್ಚಾಯ್ತು ಬೀದಿನಾಯಿಗಳ ಹಾವಳಿ

ಶನಿವಾರ, 27 ಮೇ 2023 (20:51 IST)
ನಗರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ  ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಕೆಲ ನಗರಗಳಲ್ಲಂತೂ ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುವಂತಾಗಿದೆ. ಪ್ರತಿದಿನ 70 ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಇನ್ನೂ ಒಂದೇ ತಿಂಗಳಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ನಾಯಿಗಳು ಅಟ್ಯಾಕ್ ಮಾಡಿವೆ. 2020ರಿಂದ ಇಲ್ಲಿಯವರೆಗೆ 52 ಸಾವಿರಕ್ಕೂ ಹೆಚ್ಚು ಜನರಿಗೆ ಶ್ವಾನಗಳು ಕಚ್ಚಿವೆ. 2020 ಫೆಬ್ರವರಿಯಲ್ಲಿ ನಾಯಿ ಕಡಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಬಿಬಿಎಂಪಿ ಲೆಕ್ಕಾಚಾರದ ಪ್ರಕಾರ ನಗರದಲ್ಲಿ ಸುಮಾರು 3 ಲಕ್ಷ ಬೀದಿ ನಾಯಿಗಳಿವೆ. ಜನವರಿಯಲ್ಲಿ ಸುಮಾರು 1,677 ಜನರ ಮೇಲೆ ನಾಯಿಗಳು ದಾಳಿ ನಡೆಸಿವೆ. ಫೆಬ್ರವರಿಯಲ್ಲಿ 1,135, ಮಾರ್ಚ್ನಲ್ಲಿ 1,800, ಏಪ್ರಿಲ್ನಲ್ಲಿ 1,677, ಮೇ ತಿಂಗಳಿನಲ್ಲಿ 1,841, ಜೂನ್ನಲ್ಲಿ 1,140 ಹಾಗೂ ಜುಲೈನಲ್ಲಿ 483 ಜನರ ಮೇಲೆ ಶ್ವಾನಗಳು ಅಟ್ಯಾಕ್ ಮಾಡಿವೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ