ಧುಮ್ಮಿಕ್ಕಿ ಹರಿಯುತ್ತಿರುವ ಭದ್ರಾ ನದಿ: ಬದುಕು ಅತಂತ್ರ

ಸೋಮವಾರ, 16 ಜುಲೈ 2018 (11:19 IST)
ಭದ್ರಾನದಿ ಧುಮ್ಮಿಕ್ಕಿ ಹರಿಯುತ್ತಿರುವ ಜನರ ಬದುಕು ಅತಂತ್ರಕ್ಕೆ ಸಿಲುಕಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯವಾಗುತ್ತಿದೆ. ಏತನ್ಮಧ್ಯೆ ಭದ್ರ ನದಿ ದಾಟಲಾಗದೆ ಜನರು ಪರದಾಟವನ್ನು ನಡೆಸುತ್ತಿದ್ದಾರೆ.

ಭದ್ರಾವತಿ ನದಿ ತುಂಬಿ ತುಳುಕುತ್ತಿರುವುದರಿಂದ ಹಲವಾರು ಕುಟುಂಬಗಳು ಅತಂತ್ರಗೊಂಡಿವೆ.  ನದಿ ದಾಟಲಾಗದೆ ಪರದಾಟ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಹಾಗೂ ಸುತ್ತಲಿನ ಗ್ರಾಮಗಳ ಜನರು ತೊಂದರೆ ಅನುಭವಿಸುವಂತಾಗಿದೆ.

40 ವರ್ಷಗಳಿಂದ ತೆಪ್ಪದಲ್ಲೇ ನದಿ ದಾಟ್ತಿದ್ದ ಕೆಲವು ಕುಟುಂಬಗಳು ಈಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿವೆ. ಎಂಟು ದಿನಗಳಿಂದ ಮನೆ ಬಿಟ್ಟು ಹೊರಬಾರದ ಜನರು ನದಿ ಪ್ರವಾಹಕ್ಕೆ ಹೆದರಿದ್ದಾರೆ. ದಿನನಿತ್ಯದ ಬಳಕೆ ಸಾಮಗ್ರಿಯನ್ನೂ ತರಲಾಗದೆ ಕಂಗಾಲಾಗಿರೋ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ತೆಪ್ಪ ಬಿಟ್ರೆ ಇವರಿಗೆ ಬದುಕೇ ಇಲ್ಲ.
ನಗರಕ್ಕೆ ಬರೋದಕ್ಕೆ ಬೇರೆ ಮಾರ್ಗವೂ ಇಲ್ಲ. ನದಿ ನೀರು ಕಡಿಮೆಯಾಗೋವರ್ಗೂ ಮನೆಯಲ್ಲೇ ಇರಬೇಕಾದ ಸ್ಥಿತಿ ಬಂದೊದಗಿದೆ. ದಿನದಿಂದ ದಿನಕ್ಕೆ ಭದ್ರೆಯ ಒಡಲು ಕೂಡ ಜೋರಾಗ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ